Advertisement

ಟಗರು ಶತಸಂಭ್ರಮ

10:56 AM Jun 25, 2018 | Team Udayavani |

ಅಲ್ಲಿ ಕೇಕೆ, ಶಿಳ್ಳೆ, ಚಪ್ಪಾಳೆಗಳದ್ದೇ ಕಾರುಬಾರು. ಹಾಡು, ಕುಣಿತ, ಮಾತು, ತಮಾಷೆ, ಸಂಭ್ರಮವೇ ಮನೆ ಮಾಡಿತ್ತು… ಇದು ಕಂಡು ಬಂದದ್ದು ಶಿವರಾಜಕುಮಾರ್‌ ಅಭಿನಯದ “ಟಗರು’ ಚಿತ್ರದ 125 ನೇ ಸಂಭ್ರಮದಲ್ಲಿ. ಸೂರಿ ನಿರ್ದೇಶನದ “ಟಗರು’ ಶತದಿನೋತ್ಸವ ಆಚರಿಸಿ ಮುನ್ನುಗ್ಗುತ್ತಿದೆ.

Advertisement

125 ನೇ ಸಂಭ್ರಮದ ಸವಿನೆನಪಿಗಾಗಿ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌, ಅಭಿಮಾನಿಗಳ ಸಮ್ಮುಖದಲ್ಲಿ ಕಲರ್‌ಫ‌ುಲ್‌ ಕಾರ್ಯಕ್ರಮ ಆಯೋಜಿಸಿದ್ದರು. ಸಿನಿಮಾಗೆ ದುಡಿದವರು, ಕಲಾವಿದರು, ಚಿತ್ರರಂಗದ ನಟ,ನಟಿಯರನ್ನು ಆಹ್ವಾನಿಸಿ, ಚಿತ್ರದ ಫ‌ಲಕ ವಿತರಿಸುವ ಮೂಲಕ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಅಂದು ಅಭಿಮಾನಿಗಳ ಜೈಕಾರ, ಚಪ್ಪಾಳೆಗಳ ನಡುವೆ ಶಿವರಾಜಕುಮಾರ್‌ “ಟಗರು ಬಂತು ಟಗರು…’ ಹಾಡಿಗೆ ಹೆಜ್ಜೆ ಹಾಕಿ, ರಂಜಿಸಿದರು.

“ಟಗರು’ ಸಂಭ್ರಮಕ್ಕೆ ಅಂಬರೀಷ್‌, ಉಪೇಂದ್ರ, ಪುನೀತ್‌ರಾಜಕುಮಾರ್‌, ಶ್ರೀ ಮುರಳಿ, ವಿಜಯರಾಘವೇಂದ್ರ, ಧನಂಜಯ್‌, ವಸಿಷ್ಠ ಸಿಂಹ, ಮಾಸ್ತಿ, ಭಾವನಾ, ಮಾನ್ವಿತಾ, ಯೋಗರಾಜ್‌ಭಟ್‌, ದೊಡ್ಡಣ್ಣ, ರಾಕ್‌ಲೈನ್‌ ವೆಂಕಟೇಶ್‌, ನಿವೇದಿತಾ, ದೇವರಾಜ್‌, ಜಯಂತ್‌ಕಾಯ್ಕಿಣಿ, ನಾಗೇಂದ್ರಪ್ರಸಾದ್‌, ವಿತರಕ ಜಯಣ್ಣ ಸೇರಿದಂತೆ ಚಿತ್ರರಂಗದ ಅನೇಕರು ಹಾಜರಿದ್ದು, “ಟಗರು’ ಸಂಭ್ರಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next