Advertisement

ತಬ್ಲಿಘಿ ಭಾರತ ಮಾತ್ರವಲ್ಲದೇ ಇಡೀ ಜಗತ್ತಿಗೇ ಅಪಾಯಕಾರಿ?

12:36 AM Dec 16, 2021 | Team Udayavani |

ಹೊಸದಿಲ್ಲಿ: ಸುನ್ನಿ ಇಸ್ಲಾಮಿಕ್‌ ಮಿಷನರಿ ಮೂವ್‌ಮೆಂಟ್‌ ತಬ್ಲಿಘಿ ಜಮಾತ್‌ ಭಾರತ ಮಾತ್ರವಲ್ಲದೇ ಇಡೀ ಜಗತ್ತಿಗೇ ಅಪಾಯಕಾರಿ.

Advertisement

ಈ ಸಂಸ್ಥೆಯು ಜೆಹಾದಿ ಸಿದ್ಧಾಂತವಾದಿ ಅಬು ಮುಸಾಬ್‌ ಅಲ್‌-ಸುರಿಯನ್ನು ಪ್ರತಿನಿಧಿಸುತ್ತಿದ್ದು, ಮಾದರಿ ಜಾಗತಿಕ ಜೆಹಾದಿ ಜಾಲವಾಗಿ ಮಾರ್ಪಾಡಾಗುವುದೇ ಇದರ ಉದ್ದೇಶ ಎಂದು ಗುಪ್ತಚರ ಮೂಲಗಳು ತಿಳಿಸಿರುವುದಾಗಿ ನ್ಯೂಸ್‌18 ವರದಿ ಮಾಡಿದೆ.

ಅಲ್‌ಕಾಯಿದಾ, ಐಸಿಸ್‌ನಂತಹ ಉಗ್ರ ಸಂಘಟನೆಗಳು ತಮ್ಮ ಪ್ರಭಾವವನ್ನು ಕಳೆದುಕೊಳ್ಳುತ್ತಿದ್ದರೂ, ತಬ್ಲಿಘಿ ಜಮಾತ್‌ ಮೇಲೆ ಯಾವ ಪರಿಣಾಮವೂ ಬೀರಿಲ್ಲ. ಈ ಸಂಸ್ಥೆಯು ಈಗಲೂ ಐಸಿಸ್‌ನಂಥ ಉಗ್ರ ಸಂಘಟನೆಗಳಿಗೆ ಯುವಕರನ್ನು ನೇಮಕ ಮಾಡುತ್ತಲೇ ಇದೆ. ಜಗತ್ತಿನ ಮೂಲೆಮೂಲೆಯಲ್ಲೂ ತನ್ನ ಸದಸ್ಯರಿಗೆ ತರಬೇತಿ ನೀಡುತ್ತಿದೆ.

ಪಾಕ್‌ನಂಥ ದೇಶಗಳ ಯುವಕರನ್ನು ಹೆಚ್ಚು ಸೆಳೆಯುತ್ತಿದೆ ಎಂದೂ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಕೆಲವು ದೇಶಗಳಲ್ಲಿ ಉಗ್ರ ಸಂಘಟನೆಗಳಿಗೆ ಹಣಕಾಸು ನೆರವನ್ನೂ ನೀಡುತ್ತಿವೆ. ಭಾರತದಲ್ಲೂ ಲಕ್ಷಾಂತರ ಮಂದಿ ತಬ್ಲಿಘಿ  ಅನುಯಾಯಿಗಳಿದ್ದು, ಭವಿಷ್ಯದಲ್ಲಿ ಇದು ದೇಶಕ್ಕೆ ಅಪಾಯಕಾರಿ ಆಗುವ ಸಾಧ್ಯತೆಯಿದೆ ಎಂದೂ ಗುಪ್ತಚರ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next