Advertisement

ಲಾಕ್ ಡೌನ್ ಉಲ್ಲಂಘಿಸಿ ತಬ್ಲಿಘಿಗಳು ರಾಜ್ಯದಲ್ಲಿ ಸೋಂಕು ಹರಡುತ್ತಿದ್ದಾರೆ: ಎನ್. ರವಿಕುಮಾರ್

02:43 PM May 10, 2020 | keerthan |

ಬೆಂಗಳೂರು: ದೇಶಾದ್ಯಂತ ಹಾಗೂ ರಾಜ್ಯದಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಬಂದಿದೆ ಎನ್ನುವಷ್ಟರಲ್ಲೇ, ಸರ್ಕಾರದ ಲಾಕ್ ಡೌನ್ ಉಲ್ಲಂಘಿಸಿ ಬೆಳಗಾವಿ, ಬಾಗಲಕೋಟ, ಬೆಂಗಳೂರು, ಕಲಬುರಗಿ, ಚಿತ್ರದುರ್ಗ, ದಾವಣಗೆರೆ, ಬೀದರ್ ಸೇರಿದಂತೆ ಹಲವೆಡೆ ಕೋವಿಡ್ ಸೊಂಕು ವೇಗವಾಗಿ ಹರಡಲು ತಬ್ಲಿಘಿ ಜಮಾತ್ ಗಳೇ ನೇರ ಕಾರಣರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಆರೋಪಿಸಿದ್ದಾರೆ.

Advertisement

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ತಬ್ಲಿಘೀಗಳಿಂದ ಹಿಂದೂ ಯುವಕರ ಮತಾಂತರ ನಡೆಯುತ್ತಿರುವ ಬಗ್ಗೆ ಖುದ್ದು ಮಾಲೂರು ತಹಶೀಲ್ದಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ತಬ್ಲಿಘಿಗಳು ಸದ್ಯ ಪೊಲೀಸರಿಗೆ ಸಿಗದೇ ತಪ್ಪಿಸಿಕೊಂಡಿದ್ದಾರೆ. ಆದರೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮತಾಂತರ ಮಾಡುವುದು ತಪ್ಪಲ್ಲ ಎಂದು‌ ಸಮರ್ಥಿಸಿಕೊಂಡಿದ್ದಾರೆ. ಆ ಮೂಲಕ ಮತಾಂತರಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವುದು ದುರಂತ ಮತ್ತು ಖಂಡನೀಯ ಎಂದು ರವಿಕುಮಾರ್ ಹೇಳಿದ್ದಾರೆ.

ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕೀಳುಮಟ್ಟದ ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಓಲೈಸುವುದೇ ಕಾಂಗ್ರೆಸ್ ಜಾಯಮಾನವಾಗಿರುವುದಕ್ಕೆ ಖೇದವೆನಿಸುತ್ತದೆ ಎಂದು ಕಿಡಿ ಕಾರಿದ್ದಾರೆ.

ಈ ತಬ್ಲಿಘೀಗಳು ಆಸ್ಪತ್ರೆಯಲ್ಲಿದ್ದಾಗ ಇವರ ಆರೋಗ್ಯ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸ್ ಸೇರಿದಂತೆ ಕೋವಿಡ್ ವಾರಿಯರ್ಸ್ ಸಿಬ್ಬಂದಿ ಮೇಲೆ ಉಗುಳುವುದು, ಅವಾಚ್ಯ ಶಬ್ದದಿಂದ ನಿಂದಿಸಿ, ಹಲ್ಲೆ ಮಾಡಿದ್ದರು. ಈ ಬಗ್ಗೆ ಕಾಂಗ್ರೆಸನ ಯಾರೊಬ್ಬರೂ ಮಾತನಾಡುವುದಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿರುವುದೇ ಈ ದೇಶದ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next