Advertisement

ಪದವಿ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷವೂ ಟ್ಯಾಬ್ಲೆಟ್‌-ಪಿಸಿ?

01:25 AM Oct 02, 2021 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಪದವಿ ಕೋರ್ಸ್‌ ಗಳಿಗೆ ಸರಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಜತೆಗೆ ಟ್ಯಾಬ್ಲೆಟ್‌-ಪಿಸಿಯೂ ಸಿಗಲಿದೆ.

Advertisement

ರಾಜ್ಯ ಸರಕಾರ ಸರ ಕಾರಿ ಪದವಿ ಕಾಲೇಜಿನ ಅರ್ಹ ವಿದ್ಯಾರ್ಥಿಗಳಿಗೆ 2020-21ನೇ ಸಾಲಿನಲ್ಲಿ ಟ್ಯಾಬ್ಲೆಟ್‌- ಪಿಸಿ ವಿತರಿಸಿತ್ತು. ಅದ ಕ್ಕಿಂತ ಮೊದಲು ಲ್ಯಾಪ್‌ಟಾಪ್‌ ನೀಡಲಾಗಿತ್ತು. 2021-22ನೇ ಸಾಲಿನ ವಿದ್ಯಾರ್ಥಿಗಳಿಗೂ ಟ್ಯಾಬ್ಲೆಟ್‌-ಪಿಸಿ ಒದಗಿಸು ವಂತೆ ಕಾಲೇಜು ಶಿಕ್ಷಣ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾ ವನೆ ಸಲ್ಲಿಸಲಾಗಿದೆ. ಸರಕಾರದಿಂದ ಈವರೆಗೂ ಯಾವುದೇ ನಿರ್ಧಾರ ಆಗಿಲ್ಲ. ಒಂದೊಮ್ಮೆ ಟ್ಯಾಬ್ಲೆಟ್‌-ಪಿಸಿ ನೀಡಲು ಮುಂದಾದರೂ ಸಚಿವ ಸಂಪುಟದಲ್ಲಿ ಒಪ್ಪಿಗೆಯ ಜತೆಗೆ ಆರ್ಥಿಕ ಇಲಾಖೆಯ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ.

ಹೆಚ್ಚುವರಿ ಅನುದಾನ ಅಗತ್ಯ
ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾದ ಎಲ್ಲ ರೀತಿಯ ಇ-ಕಂಟೆಂಟ್‌ ಹೊಂದಿರುವ ಟ್ಯಾಬ್ಲೆಟ್‌-ಪಿಸಿಗಳನ್ನೇ ನೀಡ ಬೇಕಿರುವುದರಿಂದ ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿ ಅನುದಾನದ ಅಗತ್ಯವಿದೆ. ಕಳೆದ ವರ್ಷ 1.15 ಲಕ್ಷ ವಿದ್ಯಾರ್ಥಿಗಳಿಗೆ 190 ಕೋ.ರೂ. ವೆಚ್ಚದಲ್ಲಿ ಟ್ಯಾಬ್ಲೆಟ್‌-ಪಿಸಿ ನೀಡಲಾಗಿದೆ. ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಈಗಾಗಲೇ 30 ಸಾವಿರಕ್ಕೂ ಅಧಿಕ ಮಂದಿ ದಾಖಲಾಗಿದ್ದಾರೆ. ದಾಖಲಾತಿ ಪ್ರಕ್ರಿಯೆ ನಡೆಯುತ್ತಿರುವುದರಿಂದ 50ರಿಂದ 60 ಸಾವಿರ ಮಂದಿ ಹೆಚ್ಚುವರಿಯಾಗಿ ದಾಖಲಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:ಕೋಲ್ಕತಾ ನೈಟ್‌ರೈಡರ್ ವಿರುದ್ಧ ಪಂಜಾಬ್‌ ಕಿಂಗ್ಸ್‌ ಗೆ 5 ವಿಕೆಟ್‌ಗಳ ಜಯ

ಈ ವಿದ್ಯಾರ್ಥಿಗಳೂ ಸೇರಿ ಸುಮಾರು 1.50 ಲಕ್ಷದಿಂದ 1.60 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌-ಪಿಸಿ ನೀಡಬೇಕಾಗಬಹುದು. ಅಲ್ಲದೆ ಇ-ಕಂಟೆಂಟ್‌ ಕೂಡ ತುಂಬಬೇಕಿರುವುದರಿಂದ ಸುಮಾರು 250 ಕೋಟಿ ರೂ.ಗೂ ಅಧಿಕ ಖರ್ಚು ಬರುವ ಸಾಧ್ಯತೆಯಿದೆ. ಸರಕಾರ ಇದಕ್ಕೆ ಹೆಚ್ಚುವರಿ ಅನುದಾನ ಮೀಸಲಿಡಬಹುದು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

2021-22ನೇ ಸಾಲಿನಲ್ಲಿ ಸರಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ ದಾಖಲಾಗುವ ಅರ್ಹ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌-ಪಿಸಿ ವಿತರಿಸುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಿ
ದ್ದೇವೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸರಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.
– ಪಿ. ಪ್ರದೀಪ್‌, ಆಯುಕ್ತ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

 

Advertisement

Udayavani is now on Telegram. Click here to join our channel and stay updated with the latest news.

Next