Advertisement

Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್

11:30 PM Dec 15, 2024 | Team Udayavani |

ಮಂಗಳೂರು: ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕೀರ್ ಹುಸೇನ್ (Zakir Hussain) (73) ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ರವಿವಾರ ರಾತ್ರಿ ಕೊನೆಯುಸಿರೆಳೆದಿರುವ ಜಾಕೀರ್ ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರು.

Advertisement

ಜಾಕೀರ್ ಹುಸೇನ್  ಇಂದಿಗೆ 17 ವರ್ಷ ಮೊದಲು ಮಂಗಳೂರು ವಿಶ್ವವಿ‌ದ್ಯಾಲಯ ಕಾಲೇಜಿನ ತೆರೆದ ಮೈದಾನದಲ್ಲಿ ನಡೆದ ಕಛೇರಿಯಲ್ಲಿ ಉಸ್ತಾದ್ ಜಾಕೀರ್ ಹುಸೇನ್  ತಮ್ಮ ಸುಮಧುರ ತಬಲ ವಾದನ ಮೂಲಕ ಶ್ರೋತೃಗಳ ಮನರಂಜಿಸಿದ್ದರು.

ಮಂಗಳೂರಿಗೆ ಅವರ ಮೂರನೇ ಭೇಟಿಯಾಗಿತ್ತು.‌ ಅದಕ್ಕಿಂತ ಮೊದಲು 1960, 1975 ರಲ್ಲೂ ಭೇಟಿ ನೀಡಿದ್ದರು. 2007 ಡಿ. 16ರಂದು ಸಂಗೀತ ಭಾರತಿ ಪ್ರತಿಷ್ಠಾನ ಹಮ್ಮಿಕೊಂಡ ಕಛೇರಿಯಲ್ಲಿ ಅವರು ಒಂದೂವರೆ ಗಂಟೆ ಕಾಲ‌ ತಬಲಾ ವಾದನ ಮೂಲಕ‌ ಜನಮನರಂಜಿಸಿದ್ದರು. ಮಂಗಳೂರಿನ ಅಂಕುಶ್ ನಾಯಕ್ ಸಹಿತ ಹಲವು ಕಲಾವಿದರು ಆಗ ಜಾಕೀರ್ ಹುಸೇನ್‌ ರಿಗೆ ಸಾಥ್ ನೀಡಿದ್ದರು.

73 ವಯಸ್ಸಿನ ಜಾಕೀರ್ ಅವರಿಗೆ ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿತ್ತು. ಜಾಕೀರ್‌ ಹುಸೇನ್ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next