Advertisement

T20 World Cup;106 ರನ್‌ ಮಾಡಿಯೂ ಗೆಲುವು: ಬಾಂಗ್ಲಾಕ್ಕೆ ಸೂಪರ್‌-8 ಟಿಕೆಟ್‌

11:27 PM Jun 17, 2024 | Team Udayavani |

ಕಿಂಗ್ಸ್‌ಟೌನ್‌ (ಸೇಂಟ್‌ ವಿನ್ಸೆಂಟ್‌): ಬಾಂಗ್ಲಾದೇಶ ಸೂಪರ್‌-8 ಸುತ್ತು ಪ್ರವೇಶಿ ಸಿದ 8ನೇ ಹಾಗೂ ಕೊನೆಯ ತಂಡವಾಗಿ ಮೂಡಿ ಬರುವುದರೊಂದಿಗೆ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಲೀಗ್‌ ಕೌತುಕಕ್ಕೆ ತೆರೆ ಬಿದ್ದಿದೆ. ಇನ್ನು ಎಂಟರ ಸುತ್ತಿನ ಸಮರ. ಇದು ಬುಧವಾರದಿಂದ ಮೊದಲ್ಗೊಳ್ಳಲಿದೆ.

Advertisement

ನೇಪಾಲ ವಿರುದ್ಧದ ತನ್ನ ಕೊನೆಯ ಲೀಗ್‌ ಮುಖಾಮುಖಿಯಲ್ಲಿ ಬಾಂಗ್ಲಾದೇಶ ಬಹಳ ಕಷ್ಟದಿಂದ 21 ರನ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾ 19.3 ಓವರ್‌ಗಳಲ್ಲಿ ಕೇವಲ 106ಕ್ಕೆ ಆಲೌಟ್‌ ಆದರೆ, ಜವಾಬಿತ್ತ ನೇಪಾಲ 19.2 ಓವರ್‌ಗಳಲ್ಲಿ 85 ರನ್ನಿಗೆ ಕುಸಿಯಿತು. ಇದರೊಂದಿಗೆ ಬಾಂಗ್ಲಾದೇಶ “ಡಿ’ ವಿಭಾಗದ ದ್ವಿತೀಯ ಸ್ಥಾನಿಯಾಯಿತು.

ಬಾಂಗ್ಲಾದೇಶ ದಾಖಲೆ
ಬಾಂಗ್ಲಾದೇಶ ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಅತೀ ಕಡಿಮೆ ರನ್‌ ಮಾಡಿಯೂ ಗೆಲುವು ಸಾಧಿಸಿದ ದಾಖಲೆ ಸ್ಥಾಪಿಸಿತು. ಇದೇ ಕೂಟದಲ್ಲಿ ತನ್ನ ವಿರುದ್ಧ ದಕ್ಷಿಣ ಆಫ್ರಿಕಾ ಕೇವಲ 114 ರನ್‌ ಮಾಡಿಯೂ ಗೆದ್ದ ದಕ್ಷಿಣ ಆಫ್ರಿಕಾ ದಾಖಲೆಯನ್ನು ಮುರಿಯಿತು.

ಹಿಂದಿನ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾಕ್ಕೆ ಬೆವರಿಳಿಸಿ ಒಂದು ರನ್‌ ಸೋಲನುಭವಿಸಿದ್ದ ನೇಪಾಲ, ಇದೇ ಜಿಗುಟು ಆಟವನ್ನು ಮುಂದು ವರಿಸಿ ಬಾಂಗ್ಲಾವನ್ನು ಕಾಡಿತು. ಆದರೆ “ಫಿನಿಶಿಂಗ್‌’ ವೈಫ‌ಲ್ಯದಿಂದ ಮತ್ತೂಂದು ಸೋಲನ್ನು ಕಾಣ ಬೇಕಾಯಿತು.

ಒಂದು ಹಂತದಲ್ಲಿ ನೇಪಾಲ 5ಕ್ಕೆ 78 ರನ್‌ ಮಾಡಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ 7 ರನ್‌ ಅಂತರದಲ್ಲಿ ಉಳಿದ 5 ವಿಕೆಟ್‌ ಕಳೆದುಕೊಂಡು ತೀವ್ರ ನಿರಾಸೆ ಅನುಭವಿಸಿತು.

Advertisement

ಔಟ್‌ಸ್ವಿಂಗ್‌ ಸ್ಪೆಷಲಿಸ್ಟ್‌ ತಾಂಜಿಮ್‌ ಹಸನ್‌ ಶಕಿಬ್‌ 7 ರನ್ನಿಗೆ 4 ವಿಕೆಟ್‌ ಉರುಳಿಸಿ ನೇಪಾಲ ವನ್ನು ಕಾಡಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶನವಾಗಿದೆ. ಮುಸ್ತಫಿಜುರ್‌ ರೆಹಮಾನ್‌ 7 ರನ್ನಿಗೆ 3 ವಿಕೆಟ್‌ ಉಡಾಯಿಸಿದರು. 2 ವಿಕೆಟ್‌ ಶಕಿಬ್‌ ಅಲ್‌ ಹಸನ್‌ ಪಾಲಾಯಿತು.
ಬಾಂಗ್ಲಾವನ್ನು ಕಾಡಿದ ಬೌಲರ್‌ಗಳೆಂದರೆ ಸೋಮ್‌ಪಾಲ್‌ ಕಾಮಿ, ದೀಪೇಂದ್ರ ಸಿಂಗ್‌, ರೋಹಿತ್‌ ಪೌದೆಲ್‌ ಮತ್ತು ಸಂದೀಪ್‌ ಲಮಿಚಾನೆ. ಎಲ್ಲರೂ ತಲಾ ಎರಡು ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌
ಬಾಂಗ್ಲಾದೇಶ-19.3 ಓವರ್‌ಗಳಲ್ಲಿ 106 (ಶಕಿಬ್‌ 17, ಮಹಮದುಲ್ಲ 13, ರಿಶಾದ್‌ 13, ಸೋಮ್‌ಪಾಲ್‌ 10ಕ್ಕೆ 2, ಲಮಿಚಾನೆ 17ಕ್ಕೆ 2, ಪೌದೆಲ್‌ 20ಕ್ಕೆ 2, ದೀಪೇಂದ್ರ 22ಕ್ಕೆ 2). ನೇಪಾಲ-19.2 ಓವರ್‌ಗಳಲ್ಲಿ 85 (ಕುಶಲ್‌ ಮಲ್ಲ 27, ದೀಪೇಂದ್ರ 25, ಆಸಿಫ್ 17, ತಾಂಜಿಮ್‌ 7ಕ್ಕೆ 4, ಮುಸ್ತಫಿಜುರ್‌ 7ಕ್ಕೆ 3, ಶಕಿಬ್‌ 9ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next