Advertisement

T20 World Cup; ಅಭಿಮಾನಿಗೆ ಹೊಡೆಯಲು ಮುಂದಾದ ಹ್ಯಾರಿಸ್‌ ರೌಫ್

09:40 PM Jun 18, 2024 | Team Udayavani |

ಲಾಡರ್‌ಹಿಲ್‌: ಪಾಕಿಸ್ಥಾನದ ವೇಗಿ ಹ್ಯಾರಿಸ್‌ ರೌಫ್ ಕ್ರಿಕೆಟ್‌ ಅಭಿಮಾನಿಯೊಬ್ಬರಿಗೆ ಹೊಡೆಯಲು ಹೋದ ವೀಡಿಯೋ ಒಂದು ಭಾರೀ ಹರಿದಾಡುತ್ತಿದೆ.

Advertisement

ಫ್ಲೋರಿಡಾದಲ್ಲಿ ಪತ್ನಿಯೊಂದಿಗೆ ಹೊಟೇಲಿನತ್ತ ನಡೆದು ಹೋಗುತ್ತಿದ್ದಾಗ ಫ‌ುಟ್‌ಪಾತ್‌ನಲ್ಲಿದ್ದ ಅಭಿಮಾನಿಗಳ ಗುಂಪೊಂದು ಹ್ಯಾರಿಸ್‌ ರೌಫ್ ಕುರಿತು ಏನೋ ಹೇಳಿದೆ. ಇದರೊಂದಿಗೆ ರೊಚ್ಚಿಗೆದ್ದ ರೌಫ್, ಆ ಗುಂಪಿನಲ್ಲಿದ್ದ ಒಬ್ಬನಿಗೆ ಹೊಡೆಯಲು ಮುಂದಾಗಿದ್ದಾರೆ. ಪತ್ನಿ ತಡೆದರೂ ಕೇಳಲಿಲ್ಲ. ಉಳಿದವರು ಮಧ್ಯ ಪ್ರವೇಶಿದರೂ ರೌಫ್ ಸಿಟ್ಟು ತಣಿಯಲಿಲ್ಲ.

“ನೀನು ಭಾರತದವನಾ? ಅದಕ್ಕೇ ಜಗಳಕ್ಕೆ ಬರುತ್ತೀಯ…’ ಎಂದಾಗ, “ಇಲ್ಲ ನಾನು ಪಾಕಿಸ್ಥಾನದವನೇ’ ಎಂದು ಆತ ಉತ್ತರಿಸಿದ್ದಾನೆ. ಆಗ ರೌಫ್ ಇನ್ನಷ್ಟು ಕ್ರುದ್ಧರಾದರು. “ನೀನು ಪಾಕಿಸ್ಥಾನದವನಾಗಿಯೂ ಈ ರೀತಿ ವರ್ತಿಸುತ್ತಿಯ? ನಿನ್ನ ಹೆತ್ತವರು ಹೀಗಾ ಬೆಳೆಸಿದ್ದು?’ ಎಂದು ರೌಫ್ ಕೇಳಿದ್ದಾರೆ.

ಪಕ್ಕದಲ್ಲಿರುವವರು ಈ ಜಗಳದ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next