ಸಿಡ್ನಿ: ನ್ಯೂಜಿಲೆಂಡ್ ತಂಡದ ಹಿರಿಯ ವೇಗಿ ಟಿಮ್ ಸೌದಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ವಿಕೆಟ್ ಉರುಳಿಸಿದ ದಾಖಲೆ ಸ್ಥಾಪಿಸಿದ್ದಾರೆ.
Advertisement
ಈ ಹಾದಿಯಲ್ಲಿ ಸೌದಿ ಬಾಂಗ್ಲಾದೇಶದ ಸ್ಪಿನ್ನರ್ ಶಕಿಬ್ ಅಲ್ ಹಸನ್ ಅವರನ್ನು ಹಿಂದಿಕ್ಕಿದರು. ಆಸ್ಟ್ರೇಲಿಯ ವಿರುದ್ಧದ ಸೂಪರ್-12 ಪಂದ್ಯದಲ್ಲಿ ಡೇವಿಡ್ ವಾರ್ನರ್ ಅವರನ್ನು ಬೌಲ್ಡ್ ಮಾಡುವ ಮೂಲಕ ಟಿಮ್ ಸೌದಿ ಈ ಮೈಲುಗಲ್ಲು ನೆಟ್ಟರು.
ಅವರ ಒಟ್ಟು ಟಿ20 ವಿಕೆಟ್ ಗಳಿಕೆ ಈಗ 125ಕ್ಕೆ ಏರಿದೆ. ಇದು ಅವರ 101ನೇ ಪಂದ್ಯ. ಈ ಮುಖಾಮುಖಿಗೂ ಮುನ್ನ ಸೌದಿ-ಶಕಿಬ್ 122 ವಿಕೆಟ್ಗಳ ಜಂಟಿ ದಾಖಲೆ ಹೊಂದಿದ್ದರು. ಶಕಿಬ್ ಅವರ 122 ವಿಕೆಟ್ 104 ಪಂದ್ಯಗಳಿಂದ ಬಂದಿದೆ.