ಸುನೀಲ್ ನಾರಾಯಣ್ 500 ಟಿ20 ಪಂದ್ಯಗಳನ್ನು ಆಡಿದ ವಿಶ್ವದ ಕೇವಲ 4ನೇ ಆಟಗಾರ. ವಿಂಡೀಸ್‌ನ 3ನೇ ಕ್ರಿಕೆಟಿಗನೂ ಹೌದು. ಉಳಿದ ಮೂವರೆಂದರೆ ಕೈರನ್ ಪೊಲಾರ್ಡ್ (660), ಡ್ವೇನ್ ಬ್ರಾವೊ (573) ಮತ್ತು ಶೋಯಿಬ್ ಮಲಿಕ್ (542).
Advertisement
ಈವರೆಗಿನ 499 ಪಂದ್ಯಗಳಲ್ಲಿ ಅವರು 536 ವಿಕೆಟ್ ಉರುಳಿಸಿ ತೃತೀಯ ಸ್ಥಾನಿಯಾಗಿದ್ದಾರೆ. ಡ್ವೇನ್ ಬ್ರಾವೊ (625 ವಿಕೆಟ್) ಮತ್ತು ರಶೀದ್ ಖಾನ್ (566 ವಿಕೆಟ್) ಮೊದಲೆರಡು ಸ್ಥಾನದಲ್ಲಿದ್ದಾರೆ.
ಬೌಲಿಂಗ್‌ನಲ್ಲಿ ಯಶಸ್ಸು ಕಾಣದೇ ಹೋದರೂ ಸುನೀಲ್ ನಾರಾಯಣ್ ಬ್ಯಾಟಿಂಗ್ ಮೂಲಕ ಅಬ್ಬರಿಸಿ ತಮ್ಮ 500ನೇ ಪಂದ್ಯವನ್ನು ಸಂಭ್ರಮಿಸಿದರು. ಚೇಸಿಂಗ್ ವೇಳೆ 22 ಎಸೆತಗಳಿಂದ 47 ರನ್ ಸಿಡಿಸಿದರು (2 ಬೌಂಡರಿ, 5 ಸಿಕ್ಸರ್). ಇದರಿಂದ ಕೆಕೆಆರ್ ಪವರ್ ಪ್ಲೇಯಲ್ಲಿ 85 ರನ್ ರಾಶಿ ಹಾಕಿತು. ಇದು ಐಪಿಎಲ್ ಪವರ್ ಪ್ಲೇಯಲ್ಲಿ ಆರ್‌ಸಿಬಿ ವಿರುದ್ಧ ಕೆಕೆಆರ್ ದಾಖಲಿಸಿದ 2ನೇ ಅತ್ಯಧಿಕ ಗಳಿಕೆ. 2017ರ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 105 ರನ್ ಮಾಡಿತ್ತು.