ದುಬೈ: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟಿ20 ಸರಣಿ ಮುಗಿದ ಹಿನ್ನೆಲೆಯಲ್ಲಿ ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಿ20 ಕ್ರಿಕೆಟ್ ನ ಅಗ್ರ ಸ್ಥಾನದಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಅವರು ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಟಿ20 ವಿಶ್ವಕಪ್ ಅದ್ಭುತ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ ರ‍್ಯಾಂಕಿಂಗ್ ನಲ್ಲಿ ಪ್ರಗತಿ ಸಾಧಿಸಿದ್ದರು. ಆದರೆ ಕಿವೀಸ್ ಸರಣಿಯಲ್ಲಿ ಆಡದ ಕಾರಣ ಅವರಿಗೆ ಹಿನ್ನಡೆಯಾಗಿದೆ. ಸದ್ಯ ವಿರಾಟ್ 11ರಿಂದ 13ನೇ ಸ್ಥಾನಕ್ಕೆ ಜಾರಿದ್ದಾರೆ.
ಇದೇ ರೀತಿ ಕಿವೀಸ್ ಸರಣಿ ಆಡದ ನಾಯಕ ರೋಹಿತ್ ಶರ್ಮಾ ಮೂರು ಸ್ಥಾನ ಕಳೆದುಕೊಂಡರು 21 ಸ್ಥಾನಕ್ಕಿಳಿದರೆ, ರಾಹುಲ್ ಎರಡು ಸ್ಥಾನ ಕಳೆದುಕೊಂಡು 19ನೇ ಸ್ಥಾನಕ್ಕಿಳಿದಿದ್ದಾರೆ. ಇಶಾನ್ ಕಿಶನ್ ಕೂಡಾ ಮೂರು ಸ್ಥಾನ ಕಳೆದುಕೊಂಡು 33 ನೇ ರ‍್ಯಾಂಕ್ ನಲ್ಲಿದ್ದಾರೆ.
ಬ್ಯಾಟಿಂಗ್ ನಲ್ಲಿ ಎರಡನೇ ರ‍್ಯಾಂಕ್ ನಲ್ಲಿ ಪಾಕಿಸ್ಥಾನದ ರಿಜ್ವಾನ್, ಮೂರನೇ ಸ್ಥಾನದಲ್ಲಿ ಡಿವೋನ್ ಕಾನ್ವೆ ಇದ್ದಾರೆ. ಮೂರನೇ ಸ್ಥಾನದಲ್ಲಿ ಪಾಕ್ ನಾಯಕ ಬಾಬರ್ ಅಜಂ ನಾಲ್ಕಕ್ಕೆ ಇಳಿದಿದ್ದಾರೆ.