Advertisement

ಲಡಾಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಚೀನಾಕ್ಕೆ ಪರೋಕ್ಷವಾಗಿ ನೀಡಿದ ಎಚ್ಚರಿಕೆಯೇ?

05:43 PM Jul 04, 2020 | keerthan |

ಮಣಿಪಾಲ: ಲಡಾಕ್ ಗೆ ಪ್ರಧಾನಿ ಮೋದಿ ಅಚ್ಚರಿಯ ಭೇಟಿ ಕೊಟ್ಟು ಯೋಧರಿಗೆ ಆತ್ಮಸ್ತೈರ್ಯ ತುಂಬಿರುವುದು, ಚೀನಾಕ್ಕೆ ಪರೋಕ್ಷವಾಗಿ ನೀಡಿದ ಎಚ್ಚರಿಕೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ನಾರಾಯಣ ದೇವಾಡಿಗ ಎಂ ಎಚ್: ಲಡಾಖ್ ಗೆ ಪ್ರಧಾನಿ ಭೇಟಿ ಕೊಟ್ಟಿದ್ದರಿಂದ ಚೀನಾಕ್ಕೆ ಯಾವ ಸಂದೇಶ ಹೋಗಿದೆಯೋ ಗೊತ್ತಿಲ್ಲ. ಆದರೆ ನಮ್ಮದೇ ದೇಶದ ಕೆಲವು ಗುಲಾಮರ ಹಿಂಭಾಗಕ್ಕೆ ಬೆಂಕಿ ಬಿದ್ದಿರುವುದು ಮಾತ್ರ ಸತ್ಯ. ಅದಕ್ಕೆ ಅವರ ಹಾಕಿರುವ ಕಮೆಂಟ್ ಗಳೇ ಸಾಕ್ಷಿ. ನರಿ ಬುದ್ದಿಯ ಕಮ್ಮೂನಿಷ್ಟ್ ಚೀನಾ ಮುಂದೆ ಸರಿಯಾಗಬಹುದು. ಉರಿ ಬಿದ್ದಿರುವ ಕಾಂಗ್ರೇಸ್ ಗುಲಾಮರು ಸರಿಯಾಗಲಾರರು.

ಗಂಗಾಧರ ರಾವ್ ಕೊಕ್ಕಡ: ಕೆಲವರು ಹುಟ್ಟಿದೇ ಮೋರಿಯಲ್ಲಿ ಮನೆಯಲ್ಲಿ ಅಪ್ಪ ಅಮ್ಮ ಸೇರಿ ಎಲ್ಲರನ್ನೂ ಮೋರಿಯೆಂದು ಕರೆದ ಅಭ್ಯಾಸ. ಬೇರೆ ಶಬ್ದ ಅವಕ್ಕೆ ಗೊತ್ತಿಲ್ಲ. ಅದಕೇನೋ ಮೋದಿಯವರನ್ನು ಹಾಗೆ ಕರೆದಿದ್ದು.

ಎ ಆರ್ ಅನ್ವರ್ ಹುಸೇನ್: ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭೇಟಿ ಕೊಟ್ಟಿರೋದು ನಮ್ಮ ಧೀರ ಸೈನಿಕರ ಜೊತೆ ಮಾತಾಡಿರೋದು ಯುದ್ಧ ವಾತಾವರಣ ಇರೋ ಗಡಿ ಭಾಗಕ್ಕೋ ಅಥವಾ ಲಡಾಖ್ ನ.ಲೇಹ್ ಬಳಿಯ ಸೇನಾ ನೆಲೆಗೋ ತಿಳಿದವರು ಹೇಳಬೇಕು. ವೀರ ಸೈನಿಕರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದಕ್ಕೆ ಅಭಿನಂದನೆ ನಾವು ಹೇಳಲೇಬೇಕು.

ಚಿ. ಮ. ವಿನೋದ್ ಕುಮಾರ್: ಸೈನಿಕರಿಗೆ ಧೈರ್ಯ ತುಂಬಲು ಅಲ್ಲ. ಮುಂದಿನ ಬಿಹಾರ ಚುನಾವಣೆಗೆ ಜನರನ್ನು ಮರುಳು ಮಾಡಲು ಹೋಗಿರುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next