Advertisement

ನಬಾರ್ಡ್ ಕರ್ನಾಟಕಕ್ಕೆ ಕನ್ನಡಿಗ ಟಿ. ರಮೇಶ್ ಸಾರಥ್ಯ

06:30 PM May 09, 2022 | Team Udayavani |

ಬೆಂಗಳೂರು: ನಬಾರ್ಡ್ ಕರ್ನಾಟಕದ ಮುಖ್ಯ ಜನರಲ್ ಮ್ಯಾನೇಜರ್ ಆಗಿ ಕರ್ನಾಟಕದವರೇ ಟಿ. ರಮೇಶ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ಹೊಂದಿರುವ ಟಿ. ರಮೇಶ್ ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್‌ಗಳ ಪ್ರಮಾಣೀಕೃತ ಸಹವರ್ತಿಯಾಗಿದ್ದಾರೆ.

ಟಿ. ರಮೇಶ್ ತಮ್ಮ ವೃತ್ತಿಜೀವನವನ್ನು ಎಸ್‌ಬಿಐನಿಂದ ಪ್ರಾರಂಭಿಸಿದ್ದು 1988 ರಲ್ಲಿ ನಬಾರ್ಡ್‌ಗೆ ಸೇರಿದರು.

ತಮ್ಮ 35 ವರ್ಷಗಳ ವೈವಿಧ್ಯಮಯ ಅನುಭವದೊಂದಿಗೆ ಇವರು ದೇಶದಾದ್ಯಂತ ವ್ಯಾಪಕವಾಗಿ ಕೆಲಸ ಮಾಡಿದ್ದು ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡು ಸೇರಿದಂತೆ. ಶ್ರೀ. ರಮೇಶ್ ಕರ್ನಾಟಕದಲ್ಲಿ ಉತ್ತರ ಕನ್ನಡದಲ್ಲಿ ಡಿಡಿಎಂ (ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ) ಆಗಿ ಕಾರ್ಯ ನಿರ್ವಹಿಸಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ  ಜಲಾನಯನ ಅಭಿವೃದ್ಧಿ, ಬುಡಕಟ್ಟು ಅಭಿವೃದ್ಧಿ ಯೋಜನೆಗಳು, ಸ್ವ-ಸಹಾಯ ಗುಂಪುಗಳು ಮತ್ತು ರೈತ ಉತ್ಪಾದಕರ ಸಂಸ್ಥೆಗಳು ಸೇರಿದಂತೆ ಅಭಿವೃದ್ಧಿ ಯೋಜನೆಗಳೊಂದಿಗೆ ಕಾರ್ಯ ನಿರ್ವಹಿಸಿ ಅಪಾರ ಅನುಭವ ‌ಹೊಂದಿದ್ದಾರೆ.

Advertisement

ಅವರು ಕರ್ನಾಟಕದ 2 ರೀಜನಲ್ ರೂರಲ್ ಬ್ಯಾಂಕ್ ಗಳ ಮಂಡಳಿಯಲ್ಲಿ ಮತ್ತು NABKISAN (ನಬಾರ್ಡ್‌ನ ಅಂಗಸಂಸ್ಥೆ) ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಮೈಕ್ರೋ ಫೈನಾನ್ಸಿಂಗ್‌ಗಾಗಿ ನಬಾರ್ಡ್‌ನ ಅಂಗಸಂಸ್ಥೆಯಾದ NABFINS Ltd. ಮಂಡಳಿಯಲ್ಲಿ ನಬಾರ್ಡ್ ನ ನಾಮನಿರ್ದೇಶಿತ ನಿರ್ದೇಶಕರಾಗಿದ್ದಾರೆ.

ಕರ್ನಾಟಕ ಪ್ರಾದೇಶಿಕ ಕಚೇರಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೊದಲು, ಶ್ರೀ ರಮೇಶ್ ಅವರು ಬ್ಯಾಂಕ್‌ನ ಒಟ್ಟಾರೆ ವ್ಯವಹಾರ ಬಜೆಟ್, ಕ್ರೆಡಿಟ್ ಪ್ಲಾನಿಂಗ್ ಯೋಜನೆ, ಬ್ಯಾಂಕ್‌ಗಳಿಗೆ ಕೃಷಿ ಸಾಲದ ಗುರಿಯನ್ನು ನಿಗದಿಪಡಿಸುವುದು ಮತ್ತು ಸಾಲದ ಹರಿವಿನ ಮೇಲ್ವಿಚಾರಣೆ ಮತ್ತು ಭಾರತ ಸರ್ಕಾರದ ವ್ಯವಹರಿಸುವಿಕೆಯನ್ನು ನಿರ್ವಹಿಸುವ ಕಾರ್ಪೊರೇಟ್ ಯೋಜನಾ ವಿಭಾಗದ ಮುಖ್ಯಸ್ಥರಾಗಿದ್ದರು. ಆರ್ ಬಿಐ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಅಂಶಗಳ ಕುರಿತು ಸಾಕಷ್ಟು ಯೋಜನೆಗಳನ್ನು ಇವರು ಜಾರಿಗೆ ತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next