Advertisement

ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್‌ನಿಕಟವರ್ತಿ ಬಂಧನ

07:13 PM Aug 10, 2022 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ನಿಕಟವರ್ತಿ ಹಾಗೂ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್ (ಪಿಟಿಐ)ನ ಪ್ರಮುಖ ನಾಯಕ ಶಾಭಾಜ್‌ ಗಿಲ್‌ ಅವರನ್ನು ಬಂಧಿಸಲಾಗಿದೆ ಮತ್ತು 2 ದಿನಗಳ ಕಾಲ ಅವರನ್ನು ರಿಮಾಂಡ್‌ಗೆ ಒಪ್ಪಿಸಿ ಸ್ಥಳೀಯ ಕೋರ್ಟ್‌ ಆದೇಶ ನೀಡಿದೆ. ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗಿದೆ.

Advertisement

ಖಾಸಗಿ ಸುದ್ದಿವಾಹಿನಿಗಳ ಜತೆಗೆ ಸೇರಿಕೊಂಡು ಸರ್ಕಾರದ ವಿರುದ್ಧ ವ್ಯವಸ್ಥಿತ ಪ್ರಚಾರಕ್ಕೆ ನಡೆಸುತ್ತಿದ್ದ ಆರೋಪ ಮಾಡಲಾಗಿದೆ. ಈ ಮೂಲಕ ಮಾಜಿ ಪ್ರಧಾನಿಗೆ ಹಲವು ರೀತಿಯ ಇಕ್ಕಟ್ಟುಗಳು ಎದುರಾಗಲಾರಂಭಿಸಿವೆ.

ಅಲ್ಲಿನ ಖಾಸಗಿ ಚಾನೆಲ್‌ ಎಆರ್‌ವೈನಲ್ಲಿ ಕಾರ್ಯಕ್ರಮವೂ ಪ್ರಸಾರವಾಗಿತ್ತು. ಸದ್ಯ ಅದರ ಮೇಲೆ ನಿಷೇಧ ಹೇರಲಾಗಿದೆ. ಅದರ ಹಿಂದೆ ಯಾರು ಇದ್ದಾರೆ ಎಂಬ ಬಗ್ಗೆ ತನಿಖೆ ನಡೆಯಬೇಕಾಗಿದೆ ಎಂದು ಪಾಕ್‌ ಸರ್ಕಾರ ಪ್ರತಿಪಾದಿಸಿದೆ.

ಮೇಲ್ಮನವಿ: ಇನ್ನೊಂದೆಡೆ, ಪಾಕಿಸ್ತಾನದ ಚುನಾವಣಾ ಆಯೋಗ ಇಮ್ರಾನ್‌ ಖಾನ್‌ ಅವರ ಪಕ್ಷಕ್ಕೆ ಅನಾಮಧೇಯ ಮೂಲಗಳಿಂದ ದೇಣಿಗೆ ಸಂಗ್ರಹಿಸಿದೆ. ಇದು ಸಂವಿಧಾನದ ನಿಯಮಗಳ ಉಲ್ಲಂಘನೆ ಎಂದು ತೀರ್ಪು ನೀಡಿತ್ತು. ಅದರ ವಿರುದ್ಧ ಖಾನ್‌ ಅವರ ಪಕ್ಷ ಇಸ್ಲಾಮಾಬಾದ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next