Advertisement

Syria;ರಾಸಾಯನಿಕ ಶಸ್ತ್ರಾಸ್ತ್ರ ಸ್ಥಳಗಳ ಮೇಲೆ ಇಸ್ರೇಲ್‌ ದಾಳಿ?

01:08 AM Dec 10, 2024 | Team Udayavani |

ಜೆರುಸಲೇಂ: ಸಿರಿಯಾದಲ್ಲಿನ ಆಡಳಿತ ಕೊನೆಗೊಂಡು ದೇಶ ಬಂಡುಕೋರರ ವಶವಾಗುತ್ತಿದ್ದಂತೆ, ಸಿರಿಯಾ ಮೇಲೆ ಇಸ್ರೇಲ್‌ ರಾಕೆಟ್‌ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ. ಸಿರಿಯಾದಲ್ಲಿ ಸಂಗ್ರಹಿಸಲಾಗಿದೆ ಎನ್ನಲಾದ ರಾಸಾಯನಿಕ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳು ಬಂಡುಕೋರರಿಗೆ ಸಿಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Advertisement

ಸಿರಿಯಾದ ಉತ್ತರಾಧಿಕಾರಿ ಅಸಾದ್‌ ಸೋಲನ್ನು ಇಸ್ರೇಲ್‌ ಸ್ವಾಗತಿಸಿದ್ದರೂ ಇಸ್ರೇಲ್‌ ಜನರ ಹಿತದೃಷ್ಟಿಯಿಂದ ಈ ದಾಳಿ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬನ್ನುಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಮೆಜ್ಜಾ ಮಿಲಿಟರಿ ಏರ್‌ಪೋರ್ಟ್‌ ಬಳಿ ವಾಯು ದಾಳಿ ನಡೆದಿರುವುದನ್ನು ಡಮಾಸ್ಕಸ್‌ನ ಮಾಧ್ಯಮವೊಂದು ಖಚಿತಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸಿರಿಯಾ ಮೇಲೆ ಹಲವು ಬಾರಿ ಇಸ್ರೇಲ್‌ ವಾಯುದಾಳಿ ನಡೆಸಿತ್ತು.

ಸಿರಿಯಾದಲ್ಲಿ ಶೀಘ್ರ ಸ್ಥಿರತೆ ಬರಲಿ: ಭಾರತ
ಸಿರಿಯಾದಲ್ಲಿ ಬಶರ್‌ ಅಸಾದ್‌ ಅವರ ಆಡಳಿತ ಕುಸಿಯುತ್ತಿದ್ದಂತೆ ಭಾರತ ಮತ್ತು ಸಿರಿಯಾ ನಡುವಿನ ಸಂಬಂಧ ಹಾಳಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸಿರಿಯಾದಲ್ಲಿ ಶೀಘ್ರ ರಾಜಕೀಯ ಸ್ಥಿರತೆ ಬರಲಿ ಎಂದು ಭಾರತ ಆಶಿಸಿದೆ. ನೆಹರೂ ಪ್ರಧಾನಿಯಾಗಿದ್ದ ಕಾಲದಲ್ಲೇ ಸಿರಿಯಾ ಹಾಗೂ ಭಾರತದ ನಡುವೆ ರಾಜತಾಂತ್ರಿಕ ಸಂಬಂಧ ಆರಂಭವಾಗಿತ್ತು. ಕಾಶ್ಮೀರದ ವಿಷಯದಲ್ಲಿ ಬಹುತೇಕ ಮುಸ್ಲಿಂ ರಾಷ್ಟ್ರಗಳು ಪಾಕಿಸ್ಥಾನಕ್ಕೆ ಬೆಂಬಲ ನೀಡಿದ್ದರೆ, ಸಿರಿಯಾ ಮಾತ್ರ ಭಾರತದ ಪರವಾಗಿತ್ತು. 370ನೇ ವಿಧಿ ರದ್ದಾದ ಸಮಯದಲ್ಲೂ ಸಹ ಅದು ಭಾರತ ಆಂತರಿಕ ವಿಷಯ ಎಂದು ಸಿರಿಯಾ ಹೇಳಿತ್ತು. ಇದೀಗ ಅಸಾದ್‌ ಸರಕಾರ ಬಿದ್ದಿರುವ ಕಾರಣ, ಬಂಡುಕೋರರು ಐಸಿಸ್‌ ಅಥವಾ ಪಾಕಿಸ್ಥಾನಕ್ಕೆ ಬೆಂಬಲ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಸಾದ್‌ರ ಕಾರು ಬಂಡುಕೋರರ ಪಾಲು!
ಸಿರಿಯಾವನ್ನು ವಶಪಡಿಸಿಕೊಂಡಿ­ರುವ ಬಂಡುಕೋರರು ಬಶ‌ರ್‌ ಅಸಾದ್‌ ಅವರ ಅರಮನೆಯ­ಲ್ಲಿ­ರುವ ಗ್ಯಾರೇಜನ್ನು ಪ್ರವೇಶಿಸಿ­ದ್ದಾರೆ. ಅಲ್ಲಿ ಮರ್ಸಿಡೆಸ್‌, ಫೋಶಾì, ಆಡಿ ಮತ್ತು ಫೆರಾರಿ ಸೇರಿದಂತೆ ಹಲವು ಐಶಾ­ರಾಮಿ ಕಾರುಗಳ ಸಂಗ್ರಹ­ವಿದ್ದು, ಅವೆ­ಲ್ಲವೂ ಬಂಡುಕೋರರ ಪಾಲಾ­ಗಿದೆ. ಅಧ್ಯಕ್ಷ ಅಸಾದ್‌ ತನ್ನ ಅಧಿಕಾ­ರವಧಿಯಲ್ಲಿ ಇವುಗಳನ್ನು ಸಂಗ್ರಹಿ­ಸಿದ್ದರು. ಬಂಡು­ಕೋರರು ಮಾಡಿರುವ ವೀಡಿ­ಯೋ ಈಗ ವೈರಲ್‌ ಆಗಿದ್ದು, ಬಂಡು­ಕೋರರು ಇವುಗಳನ್ನು ಡ್ರೈವ್‌ ಮಾಡು­ತ್ತಿರುವುದು ರೆಕಾರ್ಡ್‌ ಆಗಿದೆ.

ಸಿರಿಯಾ ರಾಷ್ಟ್ರಧ್ವಜ ಬದಲು?
­­ಡಮಾಸ್ಕಸ್‌: ಸಿರಿಯಾದಲ್ಲಿ ಬಶರ್‌ ಅಸಾದ್‌ ಆಡಳಿತ ಕೊನೆಗೊಳ್ಳುತ್ತಿದ್ದಂ­ತೆಯೇ ರಾಜಧಾನಿ ಡಮಾಸ್ಕಸ್‌ನಲ್ಲಿ ಬಂಡುಕೋರ ಗುಂಪು ಹಯಾತ್‌ ತಹ್ರೀರ್‌ ಅಲ್‌-ಶಾಮ್‌ನ ಬಾವುಟ­ಗಳು ರಾರಾಜಿಸುತ್ತಿವೆ. ಈ ಬಂಡು­ಕೋರರ ಬಾವುಟವೇ ಸಿರಿಯಾದ ಭವಿಷ್ಯದ ಬಾವುಟವಾಗಬಹುದು ಎಂಬ ಚರ್ಚೆ­ಗಳು ಆರಂಭವಾಗಿದೆ. ಈ ಬಾವುಟವನ್ನು 1980­ರಿಂದ ರಾಷ್ಟ್ರಧ್ವಜವಾಗಿ ಬಳಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next