Advertisement

ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಭಾರತೀಯರಿಗೆ ಮತ್ತೊಂದು ಸವಾಲು

10:43 PM Jan 17, 2022 | Team Udayavani |

ಲಕ್ನೋ: ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌ ಕೂಟ ಮಂಗಳವಾರ ದಿಂದ ಲಕ್ನೋದ “ಬಾಬು ಬನಾ ರಸಿ ಇಂಡೋರ್‌ ಸ್ಟೇಡಿಯಂ’ನಲ್ಲಿ ಆರಂಭವಾಗಲಿದೆ.

Advertisement

ಕಳೆದ “ಇಂಡಿಯಾ ಓಪನ್‌’ ಬ್ಯಾಡ್ಮಿಂಟನ್‌ ಸೆಮಿಫೈನಲ್‌ನಲ್ಲಿ ಆಘಾತಕಾರಿ ಸೋಲನುಭವಿಸಿದ್ದ ಪಿ.ವಿ. ಸಿಂಧು ಇಲ್ಲಿ ಪ್ರಶಸ್ತಿ ಬರ ನೀಗಿಸಿ ಕೊಳ್ಳಲು ಪ್ರಯತ್ನ ಮಾಡಬೇಕಿದೆ.

ಮತ್ತೆ ಸೈನಾ-ತೆರೆಝಾ ಪಂದ್ಯ ಭಾರತದ ಮತ್ತೋರ್ವ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್‌ ಕೂಡ ಕಣದಲ್ಲಿದ್ದು, ಮೊದಲ ಸುತ್ತಿನಲ್ಲಿ ಜೆಕ್‌ ಗಣರಾಜ್ಯದ ತೆರೆಝಾ ಸ್ವಾಬಿಕೋವಾ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಇಂಡಿಯಾ ಓಪನ್‌ ದ್ವಿತೀಯ ಸುತ್ತಿನ ಪಂದ್ಯದಲ್ಲಿ ತೆರೆಝಾ ವಿರುದ್ಧ ಸೋಲನುಭವಿಸಿದ್ದ ಸೈನಾಗೆ ಸೇಡು ತೀರಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ.

ಉದಯೋನ್ಮುಖ ತಾರೆಯರಾದ ಮಾಳವಿಕಾ ಬನ್ಸೋಡ್‌, ಅಶ್ಮಿತಾ ಚಾಲಿಹಾ, ಸಮಿಯಾ ಇಮಾದ್‌ ಫಾರುಖೀ, ಐರಾ ಶರ್ಮ, ಶ್ರೀಕೃಷ್ಣ ಪ್ರಿಯಾ ಸಿಂಗಲ್ಸ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಅಶ್ವಿ‌ನಿ ಭಟ್‌-ಶಿಖಾ ಗೌತಮ್‌ ವನಿತಾ ಡಬಲ್ಸ್‌ನಲ್ಲಿ ಸೆಣಸುವರು.

ಸೌರಭ್‌ ವರ್ಮ, ಸಮೀರ್‌ ವರ್ಮ, ಶುಭಂಕರ್‌ ಡೇ, ಕಿರಣ್‌ ಜಾರ್ಜ್‌, ಮಿಥುನ್‌ ಮಂಜುನಾಥ್‌, ಪ್ರಿಯಾಂಶು ರಾಜಾವತ್‌ ಪುರುಷರ ವಿಭಾಗದ ಪ್ರಮುಖರು.

Advertisement

ಅನೇಕ ಆಟಗಾರರ ಗೈರು
ರವಿವಾರವಷ್ಟೇ ಇಂಡಿಯಾ ಓಪನ್‌ ಸಿಂಗಲ್ಸ್‌ ಪ್ರಶಸ್ತಿ ಜಯಿಸಿದ ಲಕ್ಷ್ಯ ಸೇನ್‌, ಡಬಲ್ಸ್‌ ಚಾಂಪಿಯನ್‌ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಈ ಸೂಪರ್‌-300 ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ.

ಕೋವಿಡ್‌ ಪಾಸಿಟಿವ್‌ನಿಂದಾಗಿ ಒಂದು ವಾರದ ಕ್ವಾರಂಟೈನ್‌ನಲ್ಲಿರುವ ಕೆ. ಶ್ರೀಕಾಂತ್‌, ಬಿ. ಸಾಯಿ ಪ್ರಣೀತ್‌, ಅಶ್ವಿ‌ನಿ ಪೊನ್ನಪ್ಪ, ಮನು ಅತ್ರಿ ಕೂಡ ಭಾರತದ ಈ ಪಂದ್ಯಾವಳಿಯಿಂದ ದೂರ ಉಳಿಯಲಿದ್ದಾರೆ. ಉಳಿದವರು ಇದರ ಲಾಭ ಎತ್ತಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next