Advertisement

ಭಾರತದ ಖಡಕ್ ರಾಯಭಾರಿ ಸೈಯದ್ ಅಕ್ಬರುದ್ದೀನ್ ದೀಪಾವಳಿ ಆಚರಣೆ ವೈರಲ್ ಆಗಿದ್ದೇಕೆ?

09:43 AM Oct 29, 2019 | Nagendra Trasi |

ವಾಷಿಂಗ್ಟನ್:ಇಡೀ ಜಗತ್ತಿನಾದ್ಯಂತ ಭಾರತೀಯರು ದೀಪಾವಳಿ ಸಂಭ್ರಮ ಆಚರಿಸುತ್ತಿದ್ದು, ಕೆಲವರು ತಮ್ಮ ಊರಿಗೆ, ಸ್ವದೇಶಕ್ಕೆ, ಇನ್ನು ಕೆಲವರು ವಿದೇಶದಲ್ಲಿಯೇ ದೀಪಾವಳಿಯನ್ನು ಆಚರಿಸಿದ್ದರು. ಆದರೆ ಕೆಲವರು ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಿಸಿ ಗಮನಸೆಳೆದಿದ್ದಾರೆ. ಅವರಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ಕೂಡಾ ಒಬ್ಬರಾಗಿದ್ದಾರೆ.

Advertisement

ಭಾರತದ ರಾಯಭಾರಿ, ವಿಶ್ವಸಂಸ್ಥೆಯ ಖಾಯಂ ಸದಸ್ಯರಾಗಿರುವ ಸೈಯದ್ ಅಕ್ಬರುದ್ದೀನ್ ಅವರ ವಿಶಿಷ್ಟವಾದ ದೀಪಾವಳಿ ಆಚರಣೆ ಇದೀಗ ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಕಾರಣವಾಗಿದೆ.

ಸೈಯದ್ ದೀಪಾವಳಿ ವಿಶೇಷತೆ ಏನು?

ಸೈಯದ್ ಅಕ್ಬರುದ್ದೀನ್ ಅವರು ವಿಮಾನದಲ್ಲಿಯೇ ವಿಶಿಷ್ಟವಾಗಿ ದೀಪಾವಳಿ ಆಚರಿಸಿದ ಫೋಟೋವನ್ನು ಟ್ವೀಟ್ ಮಾಡಿದ್ದರು. ಸೈಯದ್ ಅವರು, ಕೆಲವರು ಬೇಗನೆ ಆಚರಿಸುತ್ತಾರೆ, ಕೆಲವರು ತಡವಾಗಿ…ನನ್ನಂತೆ ಕೆಲವರು ಹತ್ತು ಸಾವಿರ ಅಡಿ ಎತ್ತರದಲ್ಲಿ..ಇದು ಯಾವಾಗಲೂ ಖುಷಿಕೊಡುವ ದೀಪಾವಳಿ ಎಂದು ಟ್ವೀಟ್ ಮಾಡಿದ್ದರು.

Advertisement

ವಿಮಾನದಲ್ಲಿ ನೀಡಲಾದ ಫುಡ್ ಪ್ಲೇಟ್ ಜತೆ ಬ್ಯಾಟರಿ ಚಾಲಿತ ಎಲ್ ಇಡಿ ಕ್ಯಾಂಡಲ್ ಅನ್ನು ಇಟ್ಟುಕೊಂಡಿರುವ ಫೋಟೊವನ್ನು ಪೋಸ್ಟ್ ಮಾಡಿದ್ದರು. ಇದು ದೀಪಾವಳಿ ಹಬ್ಬ ಆಚರಿಸುತ್ತಿರುವಂತೆಯೇ ಕಾಣಿಸುತ್ತಿದೆ.

ಸೈಯದ್ ಅಕ್ಬರುದ್ದೀನ್ ಅವರು ತಮ್ಮ ಅಧಿಕೃತ ಅಫಿಶಿಯನ್ ಟ್ವೀಟರ್ ಖಾತೆಯಲ್ಲಿ ಈ ಫೋಟೊವನ್ನು ಪೋಸ್ಟ್ ಮಾಡಿದ್ದು, ಫಾಲೋವರ್ಸ್ ಕೂಡಾ ಹ್ಯಾಪಿ ದೀಪಾವಳಿ ಎಂದು ಟ್ವೀಟ್ ಮಾಡಿ ಶುಭ ಹಾರೈಸಿದ್ದರು. ಇನ್ನು ಕೆಲವರು ಟ್ವೀಟಿಗರು ಅಕ್ಬರುದ್ದೀನ್ ಅವರ ಕೆಲಸವನ್ನು ಶ್ಲಾಘಿಸಿದ್ದು, ಇವರನ್ನು ದೇಶದ ಬೆನ್ನೆಲುಬು ಎಂದು ಕರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next