ಕ್ಯಾನ್ಬೆರಾ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ “ಸಿಖ್ ಫಾರ್ ಜಸ್ಟಿಸ್” ಎನ್ನುವ ಸಂಘಟನೆ ಆಯೋಜಿಸಿದ್ದ ಖಲಿಸ್ತಾನಿಪರ ಕಾರ್ಯಕ್ರಮವೊಂದನ್ನು ಭದ್ರತಾಕಾರಣಗಳ ಹಿನ್ನೆಲೆ ನಗರಾಡಳಿತ ನಿಷೇಧಿಸಿದೆ. ಮುಂದಿನ ತಿಂಗಳು ಕಾರ್ಯಕ್ರಮ ನಡೆಸಲು ಸಂಘಟನೆ ಯೋಜಿಸಿ, ಅದಾಗಲೇ ಅನುಮತಿಯನ್ನೂ ಪಡೆದುಕೊಂಡಿತ್ತು. ಆದರೆ, ಭದ್ರತಾ ಸಂಸ್ಥೆಗಳ ಸಲಹೆ ಮೇರೆಗೆ ಅನುಮತಿಯನ್ನು ವಾಪಸ್ ಪಡೆಯಲಾಗಿದೆ. ಕ್ವಾಡ್ ರಾಷ್ಟ್ರಗಳ ಶೃಂಗಸಭೆ ನಿಮಿತ್ತ ಮೇ 24ರಂದು ಪ್ರಧಾನಿ ಮೋದಿ ಸಿಡ್ನಿಗೆ ತೆರಳಲಿದ್ದಾರೆ. ಈ ನಡುವೆಯೇ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
Advertisement