ಪುತ್ತೂರು : ನಗರ ಯೋಜನ ಪ್ರಾಧಿಕಾರದ ಸದಸ್ಯರು ಪುಡಾ ಕಚೇರಿಯಲ್ಲಿ ಬುಧವಾರ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ನೂತನ ಸದಸ್ಯರಿಗೆ ಶುಭ ಹಾರೈಸಿ ಮಾತನಾಡಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಅಧಿಕಾರ ಪಡೆಯುವುದಕ್ಕಿಂತ ಅನಂತರ ಸಮಾಜಕ್ಕೆ ಕೊಟ್ಟ ಸೇವೆ ಏನು ಅನ್ನುವುದೇ ಮುಖ್ಯವಾಗುತ್ತದೆ. ಪುಡಾಕ್ಕೆ ಸಂಬಂಧಿಸಿ ಝೋನ್ ವ್ಯವಸ್ಥೆ, ವ್ಯಾಪ್ತಿ ಸರಿಯಿಲ್ಲದಿರುವ ಬಗ್ಗೆ ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಎಲ್ಲ ಸಮಸ್ಯೆಗಳು ಸರಿಯಾದರೆ ಎಲ್ಲರಿಗೂ ಮನೆ ಕಟ್ಟು ಭಾಗ್ಯ ಸಿಗಬಹುದು. ಪುಡಾ ಕೂಡ ಅಧಿಕಾರದ ವ್ಯಾಪ್ತಿಯನ್ನು ತೋರಿಸಲು ಅವಕಾಶ ಇದೆ ಎಂದು ಹೇಳಿದರು.
ನೂತನ ಸದಸ್ಯರಾದ ನ್ಯಾಯವಾದಿ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ, ಅಲ್ಪಸಂಖ್ಯಾಕ ಘಟಕದ ಕಾರ್ಯದರ್ಶಿ ಬಿ.ಕೆ. ಅಬ್ದುಲ್ ರಹಿಮಾನ್, ಜಿಲ್ಲಾ ಕಾಂಗ್ರೆಸ್ ಸೇವಾ ದಳದ ಪ್ರತಿನಿಧಿ ಲ್ಯಾನ್ಸಿ ಮಸ್ಕರೇನ್ಹಸ್ ಸಾಮೆತ್ತಡ್ಕ ಅಧಿಕಾರ ಸ್ವೀಕರಿಸಿದರು.
ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಸದಸ್ಯರನ್ನು ಅಭಿನಂದಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝÉಲ್ ರಹೀಂ, ಕಾರ್ಯದರ್ಶಿಗಳಾದ ಮಹೇಶ್ ರೈ ಅಂಕೋತಿಮಾರ್, ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಉಮಾನಾಥ್ ಶೆಟ್ಟಿ, ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ ಉಪಸ್ಥಿತರಿದ್ದರು.