Advertisement

Switzerland ಪ್ರವಾಸಿ ವಿಮಾನ ಪತನ: ಪೈಲಟ್ ಸೇರಿ‌ ಮೂವರ ಸಾವು

10:51 AM May 21, 2023 | Team Udayavani |

ಸ್ವಿಟ್ಜರ್ಲೆಂಡ್‌: ಪ್ರವಾಸಿ ವಿಮಾನವೊಂದು ಸ್ವಿಟ್ಜರ್ಲೆಂಡ್‌ನ ಪಾಂಟ್ಸ್-ಡಿ-ಮಾರ್ಟೆಲ್ ಪ್ರದೇಶದಲ್ಲಿ ಶನಿವಾರ ಪತನಗೊಂಡಿದ್ದು, ಪೈಲಟ್ ಸೇರಿ‌ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಅಪಘಾತದಲ್ಲಿ ಪೈಲಟ್ ಮತ್ತು ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಲಘು ಪ್ರವಾಸಿ ವಿಮಾನವು ಸ್ವಿಸ್ ಕ್ಯಾಂಟನ್ ನ್ಯೂಚಾಟೆಲ್‌ನ ಪಾಂಟ್ಸ್-ಡಿ-ಮಾರ್ಟೆಲ್ ಬಳಿ ಕಡಿದಾದ ಭೂಪ್ರದೇಶದಲ್ಲಿ ಅಪಘಾತ ಸಂಭವಿಸಿದ ಕಾರಣ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದೆ ಎಂದು ಸ್ವಿಸ್ ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಕಾರಣ ತಕ್ಷಣವೇ ತಿಳಿದುಬಂದಿಲ್ಲ, ಆದರೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಿಸ್ ನೋಂದಣಿಯನ್ನು ಹೊಂದಿದ್ದ ವಿಮಾನವು ನೆರೆಯ ಚೌಕ್ಸ್-ಡಿ-ಫಾಂಡ್ಸ್ ಏರ್‌ಫೀಲ್ಡ್‌ನಿಂದ  ಪ್ರವಾಸಕ್ಕೆ ಹೊರಟಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next