Advertisement

ಬಿಸಿ ಟಬ್‌ ಗೆ ಬಿದ್ದರೂ ಬದುಕಿ ಉಳಿದ ವ್ಯಕ್ತಿ

07:26 PM Nov 18, 2022 | Team Udayavani |

ಬರ್ನ್: ಈಶಾನ್ಯ ಸ್ವಿಟ್ಜರ್ಲೆಂಡ್‌ನ‌ ಸೇಂಟ್‌ ಗ್ಯಾಲೆನ್‌ನ ಫ್ಯಾಕ್ಟರಿಯೊಂದರಲ್ಲಿ ಕರಗಿದ ಅಲ್ಯುಮಿನಿಯಮ್‌ ತುಂಬಿದ ದೊಡ್ಡ ಟಬ್‌ಗ ವ್ಯಕ್ತಿಯೊಬ್ಬ ಬಿದ್ದರೂ ಆಶ್ಚರ್ಯಕರವಾಗಿ ಬದುಕಿರುವ ಘಟನೆ ವರದಿಯಾಗಿದೆ.

Advertisement

ಫ್ಯಾಕ್ಟರಿಯಲ್ಲಿ 25 ವರ್ಷದ ಎಲೆಕ್ಟ್ರಿಷಿಯನ್‌ ಒಬ್ಬ ಕುಲುಮೆ ಬಳಿ ಕೆಲಸ ಮಾಡುತ್ತಿದ್ದ. ಈ ವೇಳೆ ಆಯಾತಪ್ಪಿ ಅಲ್ಯುಮಿನಿಯಮ್‌ ತುಂಬಿದ 720 ಡಿಗ್ರಿ ಸೆಲ್ಸಿಯಸ್ ತಾಪದ ದೊಡ್ಡ ಟಬ್‌ ಒಳಗೆ ಬಿದ್ದ. ಜತೆಗಿದ್ದ ಮತ್ತೊಬ್ಬ ಎಲೆಕ್ಟ್ರಿಷಿಯನ್‌ ಆತನನ್ನು ಹಗ್ಗದ ಸಹಾಯದಿಂದ ಹೊರಗೆಳೆದಿದ್ದಾನೆ. ತೀವ್ರವಾಗಿ ಸುಟ್ಟ ಗಾಯಗಳಿಂದ ಹಿಂಸೆ ಅನುಭವಿಸುತ್ತಿದ್ದ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಆತ ಬದುಕಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next