Advertisement

ಸ್ವಿಸ್‌ ಬ್ಯಾಡ್ಮಿಂಟನ್‌: ಸಿಂಧು ಆಘಾತಕಾರಿ ನಿರ್ಗಮನ

09:05 PM Mar 24, 2023 | Team Udayavani |

ಬಾಸೆಲ್‌ (ಸ್ವಿಜರ್ಲೆಂಡ್‌): ಪಿ.ವಿ.ಸಿಂಧು ಅವರ ಸೋಲಿನ ಅಭಿಯಾನ ಸ್ವಿಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲೂ ಮುಂದುವರಿದಿದೆ. ಹಾಲಿ ಚಾಂಪಿಯನ್‌ ಆಗಿರುವ ಅವರಿಲ್ಲಿ ದ್ವಿತೀಯ ಸುತ್ತಿನಲ್ಲೇ ಎಡವಿದ್ದಾರೆ. ಆದರೆ ಪುರುಷರ ಡಬಲ್ಸ್‌ನಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ವಿಶ್ವದ 9ನೇ ರ್‍ಯಾಂಕಿಂಗ್‌ ಆಟಗಾರ್ತಿಯಾಗಿರುವ ಪಿ.ವಿ.ಸಿಂಧು, ಇಂಡೋನೇಷ್ಯಾದ ಶ್ರೇಯಾಂಕರಹಿತ ಶಟ್ಲರ್‌ ಪುತ್ರಿ ಕುಸುಮಾ ವರ್ದನಿ ಎದುರು 15-21, 21-12, 18-21 ಅಂತರದ ಆಘಾತಕಾರಿ ಸೋಲುಂಡರು. 38ನೇ ರ್‍ಯಾಂಕಿಂಗ್‌ನ ಕುಸುಮಾ ವರ್ದನಿ ಮತ್ತು ಪಿ.ವಿ.ಸಿಂಧು ನಡುವೆ ನಡೆದ ಮೊದಲ ಅಂತಾರಾಷ್ಟ್ರೀಯ ಮುಖಾಮುಖೀ ಇದಾಗಿತ್ತು.

ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಶ್ರೇಯಾಂಕದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಭಾರೀ ಹೋರಾಟ ನಡೆಸಿ ತೈವಾನ್‌ನ ಫಾಂಗ್‌ ಚಿ ಲೀ-ಫಾಂಗ್‌ ಜೆನ್‌ ಲೀ ಅವರನ್ನು 12-21, 21-17, 28-26 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ವಿಶ್ವದ 6ನೇ ರ್‍ಯಾಂಕಿಂಗ್‌ನ ಭಾರತೀಯ ಜೋಡಿಯಿನ್ನು ಡೆನ್ಮಾರ್ಕ್‌ನ ಜೆಪ್‌ ಬೇ-ಲಾಸ್ಸೆ ಮಲ್ಹೆದ್‌ ಅವರನ್ನು ಎದುರಿಸಲಿದೆ.

ಪ್ರಣಯ್‌, ಶ್ರೀಕಾಂತ್‌ಗೆ ಸೋಲು: ಸಿಂಧುಗಿಂತ ಮೊದಲು ವಿಶ್ವದ 9ನೇ ರ್‍ಯಾಂಕಿಂಗ್‌ ಹಾಗೂ 5ನೇ ಶ್ರೇಯಾಂಕದ ಭಾರತೀಯ ಆಟಗಾರ ಎಚ್‌.ಎಸ್‌.ಪ್ರಣಯ್‌ ಕೂಡ ದ್ವಿತೀಯಸುತ್ತಿನ ಆಘಾತಕ್ಕೆ ಸಿಲುಕಿದ್ದರು. ಅವರು ಫ್ರಾನ್ಸ್‌ನ ಶ್ರೇಯಾಂಕರಹಿತ ಆಟಗಾರ ಕ್ರಿಸ್ಟೊ ಪೊಪೋವ್‌ ವಿರುದ್ಧ 8-21, 8-21 ಅಂತರದಿಂದ ಮುಗ್ಗರಿಸಿದ್ದರು. ಹಾಗೆಯೇ ಕೆ.ಶ್ರೀಕಾಂತ್‌ ಕೂಡ ಹಾಂಕಾಂಗ್‌ನ ಚುಕ್‌ ವ್ಯೂ ಲೀ ವಿರುದ್ಧ 20-22, 21-17 ಅಂತರದಿಂದ, ರಾಷ್ಟ್ರೀಯ ಚಾಂಪಿಯನ್‌ ಮಿಥುನ್‌ ಮಂಜುನಾಥ್‌ ಚೀನಾ ತೈಪೆಯ ಚಿಯ ಹಾವೊ ಲೀ ವಿರುದ್ಧ 19-21, 10-21 ಅಂತರದಿಂದ ಎಡವಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next