Advertisement
ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಎಚ್.ಕೆ.ಪಾಟೀಲ ಅವರ ಆಸಕ್ತಿಯಿಂದಾಗಿ ನಗರಸಭೆ ಎಸ್‌ಎಫ್‌ಸಿ ಅನುದಾನದಲ್ಲಿ ಬೆಟಗೇರಿಯ ಜಮಾದಾರ ನಗರ, ರಾಜೀವಗಾಂಧಿ ನಗರ ಹಾಗೂ ಜಿಲ್ಲಾ ಕ್ರೀಡಾಂಗಣ ಸೇರಿದಂತೆ 3 ಸುಸಜ್ಜಿತ ಈಜುಗೊಳಗಳನ್ನು ನಿರ್ಮಿಸಲಾಗಿತ್ತು.
Related Articles
ನೀರು ಶುದ್ಧೀಕರಣ ಯಂತ್ರಗಳು ಸರಿಯಾಗಿ ನಿರ್ವಹಣೆಯಿಲ್ಲದೇ ಮೂರೂ ಈಜುಗೊಳಗಳ ನೀರು ಪಾಚಿಗಟ್ಟಿವೆ. ಅದರಲ್ಲೂ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಗೊಳದ ನಾಲ್ಕು ಶುದ್ಧೀಕರಣದ ಯಂತ್ರಗಳು ಹಲವು ತಿಂಗಳುಗಳ ಕಾಲ ಚಾಲನೆಯಾಗಿಲ್ಲ. ನಿಂತಲ್ಲೇ ಯಂತ್ರಗಳು ಕೆಟ್ಟು ನಿಂತಿವೆ ಎನ್ನಲಾಗಿದೆ.
Advertisement
ಚರ್ಮ ರೋಗ ಉಲ್ಬಣ: ಈ ನಡುವೆ ಜಿಲ್ಲಾಧಿಕಾರಿಗಳು ಕೋವಿಡ್ ನಿಯಮಾವಳಿಯಲ್ಲಿ ಸಡಿಲಿಕೆ ಮಾಡಿದ್ದರಿಂದ ಈಜುಗೊಳಗಳಿಗೆ ಅನುಮತಿಸಿದ ಪರಿಣಾಮ ಪುನಾರಂಭಗೊಂಡು ಎರಡ್ಮೂರು ತಿಂಗಳು ಕಳೆದಿವೆ. ಆದರೂ, ನೀರು ಶುದ್ಧೀಕರಿಸಿಲ್ಲ. ಪರಿಣಾಮ ಆಕಾಶ ನೀಲಿ ಬಣ್ಣದಿಂದ ಕೂಡಿರುತ್ತಿದ್ದ ನೀರು ದಿನದಿಂದ ದಿನಕ್ಕೆ ಹಸಿರು ಬಣ್ಣಕ್ಕೆ ತಿರುಗಿತು. ನೀರು ಪಾಚಿ ಹಿಡಿದಂತಾಗಿದ್ದು, ನರ್ಜ್ ನಂತಹ ಕೀಟಗಳು ಉತ್ಪತ್ತಿಯಾಗಿ ದುರ್ವಾಸನೆ ಬೀರುತ್ತಿದೆ. ಕೊಳದಲ್ಲಿ ಈಜಿದವರಿಗೆ ಮೈ ತುರಿಕೆಯಾಗಿ, ಚರ್ಮರೋಗಗಳಿಗೆ ಕಾರಣವಾಗುತ್ತಿದೆ ಎಂಬುದು ಈಜುಗಾರರಾದ ಬಿ.ಆರ್.ಹೊಸಮನಿ, ಬಿ.ಯು. ಅಂಗಡಿ, ಎಂ.ಟಿ.ಫತ್ತೇಪುರ, ಪುಟ್ಟರಾಜ ಹಿರೇಮಠ ಮತ್ತಿತರರ ದೂರು.
ಕ್ರೀಡಾಂಗಣದ ಈಜು ಕೊಳದ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಜರುಗಿಸುತ್ತಿಲ್ಲ. ಒಮ್ಮೆ ಬೆಂಗಳೂರಿನಿಂದ ಮತ್ತೂಮ್ಮೆ ಹುಬ್ಬಳ್ಳಿಯಿಂದ ತಂತ್ರಜ್ಞರನ್ನು ಕರೆಸಿ ಸರಿಪಡಿಸುತ್ತೇವೆ ಎನ್ನುತ್ತಲೇ ತಿಂಗಳು ಕಳೆಯಿತು ಎಂಬುದು ಈಜುಗಾರರ ಬೇಸರದ ನುಡಿ.
ಇನ್ನೆರಡು ಕೊಳ ಕೇಳುವವರೇ ಇಲಬೆಟಗೇರಿಯ ಜಾಮದಾರ ನಗರ ಮತ್ತು ರಾಜೀವಗಾಂಧಿ ನಗರ ಈಜುಗೋಳಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕೆಲ ತಿಗಳಿಂದ ಈಜುಗೊಳಗಳು ಸ್ವಚ್ಛತೆಯನ್ನೇ ಕಂಡಿಲ್ಲ. ಬೇಸಿಗೆ ದಿನಗಳು ಆರಂಭಗೊಂಡು ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಖಾಸಗಿ ಸ್ವಿಮ್ಮಿಂಗ್ ಫೂಲ್‌ನತ್ತ ಮುಖ ಮಾಡುವಂತಾಗಿದ್ದು ವಿಪರ್ಯಾಸ. ಅವಳಿ ನಗರದಲ್ಲಿ ಸ್ವಿಮ್ಮಿಂಗ್ ಫೂಲ್‌ಗಳ ನಿರ್ಮಾಣಕ್ಕಾಗಿ ಹತ್ತಾರು ಕೋಟಿ ರೂ. ಖರ್ಚು ಮಾಡಿದ್ದಾರೆ. ಆದರೆ, ಅವು ನಿರ್ವಹಣೆ ಇಲ್ಲದೇ ಸಾರ್ವಜನಿಕರ ಬಳಕೆಗೆ ಯೋಗ್ಯವಿಲ್ಲದ ಸ್ಥಿತಿಗೆ ಬಂದಿವೆ. ದೊಡ್ಡ ಮೊತ್ತದ ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿದ್ದು ಯಾವ ಪುರುಷಾರ್ಥಕ್ಕಾಗಿ ಎಂಬುದು ಪ್ರಶ್ನೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಎಲ್ಲ ಈಜುಗೊಳಗಳನ್ನು ದುರಸ್ತಿಪಡಿಸಿ ಬೇಸಿಗೆಯಲ್ಲಿ ಅನುಕೂಲ ಮಾಡಿಕೊಡಬೇಕು.
ಶೇಖಣ್ಣ ಕವಳಿಕಾಯಿ, ಅಶೋಕ ಬರಗುಂಡಿ, ಸಾಮಾಜಿಕ ಚಿಂತಕರು ಕ್ರೀಡಾಂಗಣದ ಈಜುಗೊಳವನ್ನು ಕ್ರೀಡಾ ಇಲಾಖೆಯಿಂದ ನಿರ್ವಹಣೆ ಮಾಡುತ್ತಿದ್ದು, ಸಿಬ್ಬಂದಿಯ ಮೂರು ತಿಂಗಳ ಬಾಕಿ ವೇತನ ನೀಡಿದ್ದೇವೆ. ಹದಗೆಟ್ಟಿದ್ದ ನಾಲ್ಕೂ ಪ್ಯೂರಿಫೈರ್‌ಗಳನ್ನು ದುರಸ್ತಿಗೊಳಿಸಲಾಗಿದೆ. ಫೂಲ್ ಸ್ವಚ್ಛಗೊಳಿಸಲು ಹುಬ್ಬಳ್ಳಿ ಮೂಲದವರಿಗೆ ಗುತ್ತಿಗೆ ನೀಡಿದ್ದೇವೆ. ನಾಲ್ಕೈದು ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ.
ಡಾ|ಶರಣು ಗೋಗೇರಿ, ಪ್ರಭಾರಿ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಕೋವಿಡ್ ಕಾರಣದಿಂದ ನಗರಸಭೆ ವ್ಯಾಪ್ತಿಯ ಈಜುಗೊಳಗಳು ಬಂದ್ ಆಗಿದ್ದವು. ಹೀಗಾಗಿ ನಿರ್ವಹಣೆಯಾಗಿಲ್ಲ. ಮುಂದಿನ ಒಂದು ವಾರದಲ್ಲಿ ಮೂರೂ ಈಜುಗೊಳಗಳ ಪುನಾರಂಭಕ್ಕೆ ಕ್ರಮ ವಹಿಸುತ್ತೇವೆ.
ಉಷಾ ಮಹೇಶ ದಾಸರ,
ನಗರಸಭೆ ಅಧ್ಯಕ್ಷ ವೀರೇಂದ್ರ ನಾಗಲದಿನ್ನಿ