Advertisement

AI News: ವಿದ್ಯಾರ್ಥಿಗಳ ಕಲಿಕೆಗೆ ಸ್ವಿಫ್ಟ್ ಚಾಟ್‌

10:14 PM Sep 22, 2023 | Team Udayavani |

ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಭಾಷೆಗಳಲ್ಲಿನ ಕಲಿಕಾ ವಿಚಾರಗಳನ್ನು, ಪಠ್ಯಗಳನ್ನು ಸರಳೀಕರಣಗೊಳಿಸಿ ಅವರದ್ದೇ ಪ್ರಾದೇಶಿಕ ಭಾಷೆಗಳಲ್ಲಿ ತಲುಪಿಸುವ ಹಾಗೂ ಸಂವಾದದ ಜತೆಗೆ ಕಲಿಕಾವಿಚಾರಗಳನ್ನು ಅರ್ಥೈಸಿಕೊಳ್ಳಲು ಸಹಾಯಕವಾಗುವ ನಿಟ್ಟಿನಲ್ಲಿ ಅಮೆಜಾನ್‌ ವೆಬ್‌ ಸೇವೆಗಳ ವತಿಯಿಂದ ಕೃತಕ ಬುದ್ಧಿಮತ್ತೆ ಆಧರಿತವಾದ ಸ್ವಿಫ್ಟ್ ಚಾಟ್‌ ತಂತ್ರಜ್ಞಾನವನ್ನು ಆರಂಭಿಸಲಾಗಿದೆ.

Advertisement

ಭಾರತದಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳಿಗೆ ಇದು ಸಹಾಯಕವಾಗಿದ್ದು, 13 ಪ್ರಾದೇಶಿಕ ಭಾಷೆಗಳಲ್ಲಿ ಕಲಿಕಾ ವಿಷಯಗಳನ್ನು ಈ ತಂತ್ರಜ್ಞಾನ ಒದಗಿಸಲಿದೆ. ಇದಕ್ಕಾಗಿ 53ಕ್ಕೂ ಅಧಿಕ ಎಐ ಚಾಟ್‌ಬೋಟ್‌ಗಳನ್ನು ಈ ಸ್ವಿಫ್ಟ್ ಚಾಟ್‌ನಲ್ಲಿ ಬಳಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಶಿಕ್ಷಕರ ತರಬೇತಿ, ಶಾಲಾ ದತ್ತಾಂಶ ನಿರ್ವಹಣೆಗಳಿಗೂ ಸ್ವಿಫ್ಟ್ ಚಾಟ್‌ ಸಹಕಾರಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next