Advertisement

ಭಾರತದಲ್ಲಿ ಕಾರ್ಲ್ ಗಸ್ಟಾವ್‌ ಎಂ4 ತಯಾರಿಕೆ

07:53 AM Sep 28, 2022 | Team Udayavani |

ನವದೆಹಲಿ: ಸ್ವೀಡನ್‌ನ ರಕ್ಷಣಾ ಉತ್ಪಾದನಾ ದೈತ್ಯ ಕಂಪನಿ “ಸಾಬ್‌’, ತನ್ನ ಕಾರ್ಲ್ ಗಸ್ಟಾವ್‌ ಎಂ4 ಶಸ್ತ್ರಾಸ್ತ್ರ ವ್ಯವಸ್ಥೆಯ ತಯಾರಿಕೆಯನ್ನು ಶೀಘ್ರ ಭಾರತದಲ್ಲಿ ಆರಂಭಿಸಲಿದೆ. ಇದು ಸ್ವೀಡನ್‌ ಹೊರಗೆ ಕಾರ್ಲ್ ಗಸ್ಟಾವ್‌ ಎಂ4 ಶಸ್ತ್ರಾಸ್ತ್ರ ತಯಾರಾಗುತ್ತಿರುವ ಕಂಪನಿಯ ಮೊದಲ ಉತ್ಪಾದನಾ ಘಟಕವಾಗಿದೆ.

Advertisement

ಈ ಕುರಿತು ಮಾಹಿತಿ ನೀಡಿದ ಸಾಬ್‌ ಹಿರಿಯ ಉಪಾಧ್ಯಕ್ಷ ಗೋರ್ಗೆನ್‌ ಜೋಹನ್ಸನ್‌, “2024ರಲ್ಲಿ ಭಾರತದಲ್ಲಿ ಕಾರ್ಲ್ ಗಸ್ಟಾವ್‌ ಎಂ4 ತಯಾರಿಕೆ ಆರಂಭವಾಗಲಿದೆ.

ಈ ಶಸ್ತ್ರಾಸ್ತ್ರವು 1,500 ಮೀಟರ್‌ ವರೆಗಿನ ಗುರಿಯನ್ನು ಭೇದಿಸಲಿದೆ. ಭಾರತದಲ್ಲಿ ತಯಾರಾಗುವ ಶಸ್ತ್ರಾಸ್ತ್ರವು ಭಾರತೀಯ ಸೇನೆ ಸೇರಿದಂತೆ ಪ್ರಪಂಚದ ಇತರೆ ಸೇನೆಗಳಿಗೆ ಸರಬರಾಜಾಗಲಿವೆ. ಸಾಬ್‌ ಎಫ್ಎಫ್ವಿ ಇಂಡಿಯಾ ಕಂಪನಿ ನೋಂದಣಿ ಹಂತದಲ್ಲಿದೆ. ಭಾರತದಲ್ಲಿ ನೂತನ ಆವೃತ್ತಿಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುವುದು,’ ಎಂದು ತಿಳಿಸಿದರು.

ಚೀನ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಸೈನಿಕರು ಸದ್ಯ ಇದೇ ಕಂಪನಿಯ ಹಳೆಯ ಆವೃತ್ತಿಯ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next