Advertisement

ಅಧಿಕಾರಕ್ಕೇರಿದ ಕೆಲವೇ ಗಂಟೆಗಳಲ್ಲಿ ಸ್ವೀಡನ್ ನ ಮೊದಲ ಮಹಿಳಾ ಪ್ರಧಾನಿ ರಾಜೀನಾಮೆ!

01:40 PM Nov 25, 2021 | Team Udayavani |

ಕೋಪನ್ ಹೇಗ್: ಸ್ವೀಡನ್ ನ ಪ್ರಥಮ ಮಹಿಳಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಮ್ಯಾಗ್ಡಲೀನಾ ಅಂಡರ್ಸನ್ ಅವರು ಕೆಲವೇ ಗಂಟೆಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಹಂಸಲೇಖ ಪರ-ವಿರೋಧ ಪ್ರತಿಭಟನೆ; ಚೇತನ್ ಸಾರಥ್ಯ,ಠಾಣೆ ಎದುರು ಬಿಗಿ ಭದ್ರತೆ

ಮೈತ್ರಿ ಸರ್ಕಾರಕ್ಕೆ ಗ್ರೀನ್ ಪಾರ್ಟಿ ನೀಡಿದ್ದ ಬೆಂಬಲ ಹಿಂಪಡೆದ ಪರಿಣಾಮ ಸಂಸತ್ ನಲ್ಲಿ ಮಂಡಿಸಿದ್ದ ಬಜೆಟ್ ಗೆ ನಿರ್ಣಾಯಕ ಮತಗಳು ಬೀಳದೆ ಸೋಲುಂಟಾಗಿತ್ತು. ಇದರ ಪರಿಣಾಮ ಮ್ಯಾಗ್ಡಲೀನಾ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅಧಿಕಾರ ತೊರೆಯುವಂತಾಗಿದೆ.

ನನಗೆ ಇದು ಗೌರವದ ಪ್ರಶ್ನೆಯಾಗಿದೆ. ಆದರೆ ನಾನು ಅದರ ನ್ಯಾಯಸಮ್ಮತತೆಯನ್ನು ಪ್ರಶ್ನಿಸಲು ಆಧಾರ ಹೊಂದಿರುವ ಸರ್ಕಾರವನ್ನು ಮುನ್ನಡೆಸಲು ಬಯಸುವುದಿಲ್ಲ ಎಂದು ಮ್ಯಾಗ್ಡಲೀನಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ನಾನು ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಸರ್ಕಾರವನ್ನು ರಚಿಸಲು ಆಸಕ್ತಿ ಹೊಂದಿದ್ದು, ಶೀಘ್ರದಲ್ಲಿಯೇ ಪ್ರಧಾನಿಯಾಗಿ ಸಂಸತ್ ಪ್ರವೇಶಿಸುವುದಾಗಿ ಮ್ಯಾಗ್ಡಲೀನಾ ಅವರು ಸ್ಪೀಕರ್ ಗೆ ತಿಳಿಸಿರುವುದಾಗಿ ವರದಿ ವಿವರಿಸಿದೆ.

Advertisement

ಸರ್ಕಾರವನ್ನು ತೊರೆಯಬೇಕಾದ ಸಂದರ್ಭ ಬಂದಾಗ ಮೈತ್ರಿ ಸರ್ಕಾರ ರಾಜೀನಾಮೆ ಕೊಡಲೇಬೇಕಾಗುತ್ತದೆ. ಸಂಸದೀಯ ಪರಿಸ್ಥಿತಿಗಳು ಬದಲಾಗುವುದಿಲ್ಲ, ಆದರೆ ನಾವು ಮತ್ತೊಮ್ಮೆ ಪ್ರಯತ್ನಿಸಬಹುದಾಗಿದೆ ಎಂದು ಮ್ಯಾಗ್ಡಲೀನಾ ತಮ್ಮ ಪುನರಾಗಮನದ ಬಯಕೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next