Advertisement

ʼಒಂದು ಸರಳ ಪ್ರೇಮಕಥೆʼಗೆ ಕಾಲಿವುಡ್‌ ಬ್ಯೂಟಿ ಸ್ವತಿಷ್ಠ ಕೃಷ್ಣನ್ ನಾಯಕಿ

12:21 PM Jan 25, 2023 | Team Udayavani |

ಬೆಂಗಳೂರು: ನಿರ್ದೇಶಕ ಸಿಂಪಲ್ ಸುನಿ, ವಿನಯ್ ರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ‘ಒಂದು ಸರಳ ಪ್ರೇಮಕಥೆʼ ಚಿತ್ರಕ್ಕೆ ಕಾಲಿವುಡ್‌ ಬ್ಯೂಟಿ ಸ್ವತಿಷ್ಠ ಕೃಷ್ಣನ್ ನಾಯಕಿಯಾಗಿ ಆಯ್ಕೆಯಾಗಿದ್ದು, ಆ ಮೂಲಕ ಸ್ಯಾಂಡಲ್‌ ವುಡ್‌ ಎಂಟ್ರಿ ಕೊಡುತ್ತಿದ್ದಾರೆ.

Advertisement

ಮ್ಯೂಸಿಕಲ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ‘ಒಂದು ಸರಳ ಪ್ರೇಮಕಥೆʼ ಚಿತ್ರದ ಮೂಲಕ ‘ವಿಕ್ರಮ್’ ಚಿತ್ರದಲ್ಲಿ ನಟಿಸಿರುವ ಸ್ವತಿಷ್ಠ ಕೃಷ್ಣನ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ವಿನಯ್ ರಾಜ್ ಕುಮಾರ್, ಸಿಂಪಲ್ ಸುನಿ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ‘ಒಂದು ಸರಳ ಪ್ರೇಮಕಥೆ’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ಕೋಮಲ್‌ ಕುಮಾರ್‌ ʼರೋಲೆಕ್ಸ್‌ʼ ಗೆ ನಾಯಕಿಯಾದ ಕರಾವಳಿ ಬೆಡಗಿ ಸೋನಲ್

ಮ್ಯೂಸಿಕಲ್ ಲವ್ ಸ್ಟೋರಿ ಸಬ್ಜೆಕ್ಟ್ ಚಿತ್ರಕ್ಕಾಗಿ ನಾಯಕಿ ಹುಡುಕಾಟದಲ್ಲಿದ್ದ ಸಿಂಪಲ್ ಸುನಿ ಧಾರವಾಡ ಮೂಲದ ಕನ್ನಡತಿ ನಟಿ ಸ್ವತಿಷ್ಠ ಕೃಷ್ಣನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿದ್ದಾರೆ.

Advertisement

ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸ್ವತಿಷ್ಠ ಕೃಷ್ಣನ್ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.  ವಿನಯ್ ರಾಜ್ ಕುಮಾರ್ ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next