Advertisement

ಮಹಾ ಶಿವರಾತ್ರಿ : ಭೀಮನ ಪಾದದಲ್ಲಿ ಪೂಜೆ ಸಲ್ಲಿಸಿದ ಸ್ವರ್ಣವಲ್ಲೀ ಶ್ರೀ

06:52 PM Mar 01, 2022 | Team Udayavani |

ಶಿರಸಿ : ಮಹಾ ಶಿವರಾತ್ರಿಯ ನಿಮಿತ್ತ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ಶಾಲ್ಮಲಾ ತಟದ ಭೀಮನಪಾದಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ಮಠದ ಹಿಂದಿನ ಪರಂಪರೆಯಿಂದಲೂ ನಡೆದುಕೊಂಡು ಬಂದಿರುವ ಶಾಲ್ಮಲಾ ನದಿಯ ಭೀಮನಪಾದ ಎನ್ನುವ ಸ್ಥಳದಲ್ಲಿ ಶ್ರೀ ಶಿವಲಿಂಗಪೂಜೆ ಮತ್ತು ಶ್ರೀ ಸತ್ಯನಾರಾಯಣ ವ್ರತಕಥೆ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಿತು.

ಹಿಂದೆ ಇದೇ ಸ್ಥಳದಲ್ಲಿ ಶ್ರೀ ಮಠ ಸ್ಥಾಪನೆಯಾಗಿ ಅನೇಕ ವರ್ಷಗಳ ಕಾಲ ಯತಿಗಳು ತಪಸ್ಸು ಮಾಡಿದ ಇತಿಹಾಸಗಳಲ್ಲಿ ಇದೆ. ಈಗಲೂ ಈ ಸ್ಥಳದಲ್ಲಿ ಮಠವಿರುವ ಕುರುಹುಗಳು ಇವೆ. ರಾತ್ರಿ ಶ್ರೀಗಳವರಿಂದ ಶತರುದ್ರಾಭಿಷೇಕ ಮಹಾಪೂಜೆ ನಡೆಯತ್ತದೆ ಎಂಬುದು ಉಲ್ಲೇಖನೀಯ.

ಮಠದಲ್ಲಿ ಕೂಡ ಲಘುರುದ್ರ ಹವನ ನಡೆಯಿತು. ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ನಡೆಯಿತು.

ಇದನ್ನೂ ಓದಿ : ಅಮೆರಿಕ ಮಾದರಿಯಲ್ಲಿ ರಸ್ತೆ ಅಭಿವೃದ್ಧಿ: ಗಡ್ಕರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next