Advertisement

ಶಿರಸಿ: ಸ್ವರ್ಣವಲ್ಲೀಯಲ್ಲಿ ಲಕ್ಷ್ಮೀ ನರಸಿಂಹ ದೇವರಿಗೆ ರಥೋತ್ಸವ ಸಂಭ್ರಮ

01:45 PM May 15, 2022 | Team Udayavani |

ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಆರಾಧ್ಯ ದೇವರಾದ ಲಕ್ಷ್ಮೀ ನರಸಿಂಹ ದೇವರಿಗೆ ರಥೋತ್ಸವ ಸೇವೆ ನೃಸಿಂಹ ಜಯಂತಿಯಂದು ಶನಿವಾರ ರಾತ್ರಿ ಸಂಭ್ರಮ ಸಡಗರದಲ್ಲಿ ನಡೆಯಿತು.

Advertisement

ರಾತ್ರಿ 11:30 ಕ್ಕೆ ಪಲ್ಲಕ್ಕಿಯ ಮೂಲಕ ಮಠದಿಂದ ಹೊರಟ ದೇವರು 12 ಗಂಟೆ ಒಳಗೆ ತೇರು ಬೀದಿಯಲ್ಲಿ ಸಿಂಗಾರಗೊಂಡ ರಥದಲ್ಲಿ ಶ್ರೀದೇವರನ್ನು ರಥಾರೂಢಗೊಳಿಸಲಾಯಿತು.

ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಬಳಿಕ ರಥೋತ್ಸವ, ಮದ್ದು ಗುಂಡುಗಳ ಸೇವೆ ಕೂಡ ನಡೆಯಿತು. ರವಿವಾರ ಬೆಳಗಿನ ಜಾವ ದೇವರು ಮಠಕ್ಕೆ ವಾಪಸ್ಸಾಯಿತು. ಅಷ್ಟಾವಧಾನ ಸೇವೆಗಳು ನಡೆದವು.

ರಥದ ನಿರ್ಮಾಣ ಹಾಗೂ ರಥೋತ್ಸವದಲ್ಲಿ ರಥದ ಗಾಲಿ ನಿರ್ವಹಣೆಯನ್ನು ಮುಸ್ಲಿಂ ಸಮುದಾಯದವರು ತಲ ತಲಾಂತರದಿಂದ ನಡೆಸಿಕೊಂಡು ಬಂದರೆ, ಸಿಡಿಮದ್ದು ಪ್ರದರ್ಶನದಲ್ಲಿ ಕ್ರೈಸ್ತ ಕುಟುಂಬದ ವ್ಯಕ್ತಿ ನಿರ್ವಹಿಸುವದರಿಂದ ಈ ರಥೋತ್ಸವ ಭಾವೈಕ್ಯದ ರಥೋತ್ಸವ ಎಂದೇ ಹೆಸರಾಗಿದೆ.

ರಥೋತ್ಸವದ ಬಳಿಕ ರಾತ್ರಿ ಯಕ್ಷ ಶಾಲ್ಮಲಾ ನೇತೃತ್ವದಲ್ಲಿ ರಾಜಾ ರುದ್ರಕೋಪ ಯಕ್ಷಗಾನ ಬಯಲಾಟ ಕೂಡ ಪ್ರದರ್ಶನ ಕಂಡಿತು. ಶಂಕರ ಬ್ರಹ್ಮೂರು, ಸತೀಶ ದಂಟಕಲ, ನರಸಿಂಹ ಹಂಡ್ರಮನೆ, ವಿಘ್ನೇಶ್ವರ ಗೌಡ ಹಿಮ್ಮೇಳದಲ್ಲಿ ಅಶೋಕ ಭಟ್ಟ ಸಿದ್ದಾಪುರ, ಭಾಸ್ಕರ ಗಾಂವಕರ, ನಾಗೇಂದ್ರ ಮೂರೂರು, ಸದಾಶಿವ ಮಲವಳ್ಳಿ, ಪ್ರವೀಣ ತಟ್ಟಿಸರ, ವೆಂಕಟೇಶ ಬೊಗ್ರಿಮಕ್ಕಿ, ನಾಗರಾಜ್ ಜೋಶಿ ವಿವಿಧ ಪಾತ್ರ ಮಾಡಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next