Advertisement

ಭೈರವದಿಂದ ಭೈರವಿವರೆಗಿನ ಸ್ವರಾಂಜಲಿ ಕಾರ್ಯಕ್ರಮ

03:08 PM Jul 05, 2022 | Team Udayavani |

ಧಾರವಾಡ: ಇಂದಿನ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಸಂಗೀತ, ಕಲೆಯನ್ನು ಮಾತ್ರ ನೀಡದೆ ಮುಂದೆ ಜೀವನದಲ್ಲಿ ಶ್ರೇಷ್ಠ ಗಾಯಕ, ವಾದಕರಾಗುವ ವಿಶೇಷ ನೈಪುಣ್ಯತೆಯನ್ನು ಕಲಿಸುವ, ಸಂಸ್ಕಾರಗೊಳಿಸುವುದು ಅಗತ್ಯವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

Advertisement

ಆಲೂರು ವೆಂಕಟರಾವ್‌ ಸಾಂಸ್ಕೃತಿಕ ಭವನದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್‌ ಸೊಸೈಟಿಯು ಖ್ಯಾತ ತಬಲಾ ವಾದಕ ಪಂ| ಎಚ್‌.ಸೋಮಶೇಖರ ಸ್ಮರಣೆಯಲ್ಲಿ ಅವರ ಶಿಷ್ಯ ಬಳಗವು ರವಿವಾರ ಹಮ್ಮಿಕೊಂಡಿದ್ದ ಭೈರವದಿಂದ ಭೈರವಿವರೆಗಿನ ಸ್ವರಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಹಳಷ್ಟು ಗಾಯಕರು, ವಾದಕರು ಇರುತ್ತಾರೆ. ಆದರೆ ಅದರಲ್ಲಿ ಕೆಲವೇ ಕೆಲವರು ಶಿಷ್ಯರನ್ನು ತಯಾರು ಮಾಡುವ ವಿಶೇಷ ಗುಣ ಹೊಂದಿರುತ್ತಾರೆ. ಇಂತಹ ಗುರುಗಳಲ್ಲಿ ಸೋಮಶೇಖರರು ಒಬ್ಬರಾಗಿದ್ದಾರೆ. ಅವರ ಶಿಷ್ಯ ಬಳಗವು ಗುರುಗಳ ಹೆಸರನ್ನು ಉತ್ತುಂಗಕ್ಕೇರಿಸುವ ಕಾರ್ಯವನ್ನು ಕುಮಾರೇಶ್ವರ ಕಲ್ಚರಲ್‌ ಸೊಸೈಟಿ ಆಶ್ರಯದಲ್ಲಿ ನೆರವೇರಿಸುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕುಮಾರೇಶ್ವರ ಕಲ್ಚರಲ್‌ ಸೊಸೈಟಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡಿ, ಗುರು-ಶಿಷ್ಯ ಪರಂಪರೆ, ಸಂಬಂಧವೇನಾದರೂ ಉಳಿದಿದ್ದರೆ ಅದು ಸಂಗೀತ ಕ್ಷೇತ್ರದಲ್ಲಿ ಮಾತ್ರ ಎಂದು ಹೇಳಿದರು.

ಡಾ| ಉದಯ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಿತಾರ ಕಲಾವಿದ ಉಸ್ತಾದ್‌ ಛೋಟೆರಹಿಮತ್‌ಖಾನ್‌, ಖ್ಯಾತ ಹಿಂದುಸ್ತಾನಿ ಗಾಯಕ ಪಂ| ಕೈವಲ್ಯಕುಮಾರ ಗುರವ, ಹಿರಿಯ ಸಿತಾರ ವಾದಕರಾದ ಉಸ್ತಾದ್‌ ಶಫಿಕ್‌ ಖಾನ್‌ ಮಾತನಾಡಿದರು.

Advertisement

ಪ್ರಕಾಶ ಬಾಳಿಕಾಯಿ ಇದ್ದರು. ಸ್ವರಾಂಜಲಿ ಕಾರ್ಯಕ್ರಮದಲ್ಲಿ ಹಿರಿಯ ಹಿಂದುಸ್ತಾನಿ ಗಾಯಕ ಪಂ| ಕೈವಲ್ಯಕುಮಾರ ಗುರವ, ಸುಜೇಂದ್ರ ಕುಲಕರ್ಣಿ, ಡಾ| ಶಕ್ತಿ ಪಾಟೀಲ, ಪಂ| ಅಶೋಕ ನಾಡಗೇರ, ವಿದುಷಿ ರಾಧಾ ದೇಸಾಯಿ, ವಿದುಷಿ ಸುಜಾತಾ ಗುರವ, ಗೋಪಾಲಕೃಷ್ಣ ಭಾಗವತ್‌, ಡಾ| ವಿಜಯಕುಮಾರ ಪಾಟೀಲ ಗಾಯನ ಪ್ರಸ್ತುತ ಪಡಿಸಿದರು.

ಉಸ್ತಾದ್‌ ಶಫಿಕ್‌ಖಾನ್‌ ಸಿತಾರ ವಾದನ, ಪಂ| ಹರೀಶ ಕುಲಕರ್ಣಿ ಬಾಂಸುರಿ ವಾದನ, ಶ್ರೀಧರ ಕುಲಕರ್ಣಿ ಮತ್ತು ಕಾರ್ತಿಕ ಕಾವಟೇಕರ ತಬಲಾ ಸೋಲೋ ನಡೆಸಿಕೊಟ್ಟರು. ತಬಲಾದಲ್ಲಿ ಡಾ| ಉದಯ ಕುಲಕರ್ಣಿ, ಡಾ| ಶ್ರೀಹರಿ ದಿಗ್ಗಾವಿ, ಡಾ| ದುಂಡಯ್ಯ ಪೂಜಾರ, ಜಯತೀರ್ಥ ಪಂಚಮುಖೀ, ಕಾರ್ತಿಕ ಭಟ್ಟ, ಶ್ರೀಧರ ಕುಲಕರ್ಣಿ ಹಾಗೂ ಸಂವಾದಿನಿಯಲ್ಲಿ ಪಂ| ಗುರುಪ್ರಸಾದ ಹೆಗಡೆ, ದತ್ತರಾಜ ಮಹಾಲ್ಸಿ, ಬಸವರಾಜ ಹಿರೇಮಠ ಸಾಥ್‌ ನೀಡಿದರು.

ಡಾ| ಮಲ್ಲಿಕಾರ್ಜುನ ತರ್ಲಗಟ್ಟಿ, ಪಂ| ವಾದಿರಾಜ ನಿಂಬರಗಿ, ಪಂ| ಸಾತಲಿಂಗಪ್ಪ ಕಲ್ಲೂರ ದೇಸಾಯಿ, ಉಸ್ತಾದ್‌ ನಿಸಾರ ಅಹಮ್ಮದ, ಜಿತೇಂದ್ರ ಕುಲಕರ್ಣಿ, ಡಾ| ಉದಯ ದೇಸಾಯಿ, ನಿಜಗುಣ ರಾಜಗುರು, ಡಾ| ಎ.ಎಲ್‌.ದೇಸಾಯಿ, ಡಾ| ಶ್ರೀಧರ ಕುಲಕರ್ಣಿ, ವೀರಣ್ಣ ಪತ್ತಾರ, ಹμàಜ್‌ ಖಾನ್‌, ಜಿ.ಆರ್‌. ಭಟ್ಟ, ವೇಣುಗೋಪಾಲ ಜೋಶಿ, ಅಜಿತ ಭಾತಖಾಂಡೆ, ಡಾ| ವಿಜಯ ತ್ರಾಸದ, ವಿದ್ಯಾಭೂಷಣ ಪಂಚಮುಖೀ, ಪ್ರಸನ್‌ ಕುಲಕರ್ಣಿ ಇದ್ದರು. ಭಾಗ್ಯಶ್ರೀ ಭಟ್‌ ನಿರೂಪಿಸಿದರು. ಡಾ| ಉದಯ ಕುಲಕರ್ಣಿ ಸ್ವಾಗತಿಸಿದರು. ಡಾ| ರವಿ ಜೋಶಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next