Advertisement
ಅಲ್ಲದೇ ಶಂಖಗಳನ್ನು ಅಲಂಕಾರಿಕ ವಸ್ತುವಾಗಿಯೂ ಬಳಸಲಾಗುತ್ತಿದೆ. ಶಂಖನಾದ ಒಂದು ಗಂಭೀರ ನಾದ. ಒಮ್ಮೆ ಕೇಳಿದರೆ ಮತ್ತೂಮ್ಮೆ ಕೇಳಬೇಕೆನಿಸುವ ನಾದ. ಪೂಜಾಗೃಹದಲ್ಲಾಗಲಿ, ದೇವಾಲಯ, ಯುದ್ಧಭೂಮಿಯಲ್ಲಾಗಲಿ ಶಂಖನಾದಕ್ಕೆ ಅದರದ್ದೇ ಆದ ವೈಶಿಷ್ಟ್ಯಗುಣ ಮತ್ತು ಸ್ಥಾನಗಳಿವೆ.
Related Articles
Advertisement
ಪ್ರಪಂಚದ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಶಂಖನಾದಕ್ಕೆ ಬೇರೆ ಬೇರೆ ಉಪಯೋಗಗಳು ಮತ್ತು ಸ್ಥಾನಗಳಿವೆ. ಬುದ್ಧ ಮತದಲ್ಲಿ ಶಂಖ ನಾದಕ್ಕೆ ಎತ್ತರದ ಸ್ಥಾನವಿದ್ದರೆ, ಗ್ರೀಸ್‌ನಲ್ಲಿ ಮಂಜು ಮುಸುಕಿದ ಸಮುದ್ರದಲ್ಲಿ ಮೀನು ಹಿಡಿಯಲು ಹೋದ ದೋಣಿಗಳು ಪರಸ್ಪರ ಢಿಕ್ಕಿ ಹೊಡೆಯದಂತೆ ಅಪಾಯ ಸೂಚಕಗಳಾಗಿ ಉಪಯೋಗಿಸುತ್ತಾರೆ.
ಶಂಖದ ಹುಳಗಳು ಶಂಖದ ಗುಹೆಯೊಳಗೆ ವಾಸಿಸುತ್ತವೆ. ಪ್ರಪಂಚದ ಬೇರೆ ಬೇರೆ ಸ್ಥಳಗಳಲ್ಲಿ ಸಿಗುವ ಶಂಖಗಳ ಆಕೃತಿಗಳು ಬೇರೆ ಬೇರೆಯಾಗಿರುತ್ತವೆ.
ಶಂಖದ ಚಿಪ್ಪಿನ ಒಳಗೆ ಶಂಕುವಿನಾಕಾರದ ತೂತು ಸುರುಳಿ ಸುರುಳಿಯಾಗಿ ಇರುವ ಕಾರಣ ಇದರಿಂದ ಹೊರಡುವ ಸ್ವರವು ಸುರುಳಿ ಸುತ್ತಿರುವ ಕೊಂಬುವಾದ್ಯದ ಗುಣವನ್ನು ಹೊಂದಿದೆ. ಕೊಳವೆಯ ಉದ್ದವನ್ನು ಹೊಂದಿಕೊಂಡು ಅದರಿಂದ ಹೊರಡುವ ಶಬ್ದ ಬೇರೆ ಬೇರೆ ಕಂಪನಾಂಕಗಳಿವೆ.
ಶಂಖದ ಹೊರಗಿನ ಉದ್ದಕ್ಕಿಂತ ತೂತಿನ ಉದ್ದ ಎರಡು ಪಾಲು ಹೆಚ್ಚು ಇದೆ. ಮಹಾಭಾರತದ ಪ್ರತಿಯೊಬ್ಬ ವೀರನ ಶಂಖಕ್ಕೂ ಬೇರೆ ಬೇರೆ ಕಂಪನಾಂಕಗಳಿದ್ದು ಯಾವ ವೀರನು ಯುದ್ಧ ಭೂಮಿಯಲ್ಲಿ ಎಲ್ಲಿ ಇದ್ದಾನೆ ಎಂದು ತಿಳಿಯಲು ಸುಲಭವಾಗುತ್ತಿತ್ತು.
ಚಿಪ್ಪಿನ ಒಳಗಿನ ಹುಳವು ಸತ್ತಾಗ ಹುಳವನ್ನು ಹೊರಗೆ ತೆಗೆದು ಚಿಪ್ಪನ್ನು ಶುದ್ಧೀಕರಿಸಿ ಅದರ ಮುಚ್ಚಿದ ಕೊನೆಯನ್ನು ತೂತು ಕೊರೆಯುವ ಯಂತ್ರ, ಗರಗಸ ಅಥವಾ ಹರಿತವಾದ ಆಯುಧಗಳನ್ನು ಉಪಯೋಗಿಸಿ ತೂತು ಮಾಡುತ್ತಾರೆ. ಆ ಮೇಲೆ ಒರಟು ಕಾಗದವನ್ನು ಉಪಯೋಗಿಸಿ ಕೊರೆದ ಬಾಯನ್ನು ನಯಗೊಳಿಸುತ್ತಾರೆ. ನಮ್ಮ ತುಟಿಗಳನ್ನು ಕಂಪಿಸಿ ಗಾಳಿಯನ್ನು ಊದಿದಾಗ ಆ ಶಂಖದ ವಿಶಿಷ್ಟವಾದ ಕಂಪನಾಂಕಗಳಲ್ಲಿ ಶಂಖನಾದವು ಹೊರಡುತ್ತದೆ. ಶಂಖನಾದವನ್ನು ನಾದಗ್ರಾಹಕಗಳಲ್ಲಿ ಗ್ರಹಣ ಮಾಡಿ ವಿಶ್ಲೇಷಿಸಿದರೆ ಆ ನಾದಕ್ಕೆ 10ಕ್ಕಿಂತಲೂ ಅಧಿಕವಾಗಿ ಸಂಗತಾಂಕಗಳಿವೆ ಎಂದು ತಿಳಿಯುತ್ತದೆ. ಬೇರೆ ಬೇರೆ ಶಂಖಗಳ ಕಂಪನಾಂಕಗಳೂ ಬೇರೆ ಬೇರೆ ಮತ್ತು ಅದರ ಸಂಗತಾಂಕಗಳ ಬೆಲೆ ಮತ್ತು ಎಷ್ಟು ಸಂಗತಾಂಕಗಳಿವೆ ಎನ್ನುವುದರ ಮೇಲೆ ಪ್ರತ್ಯೇಕ ಶಂಖದ ನಾದವನ್ನೂ ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ.
ಓಂಕಾರ ನಾದದಲ್ಲಿ ಇರುವ ಕಂಪನಾಂಕಗಳನ್ನು ಶಂಖನಾದದ ಕಂಪನಾಂಕಗಳಿಗೆ ಹೋಲಿಸಿ ಅವೆರಡರ ಮಧ್ಯೆ ತುಂಬಾ ಸಾಮ್ಯತೆಯಿದೆ ಎಂದು ಗುರುತಿಸಲಾಗಿದೆ. ಯಾಂತ್ರಿಕ ಕ್ಷೇತ್ರದಲ್ಲಿ ಶಂಖದ ಮೇಲೆ ಆಧಾರಿತವಾದ ಉಪಯೋಗಗಳು ಕೆಲವು ಇವೆ. ಉದಾಹರಣೆಗೆ, ವಾಹನಗಳ ಆಗಮನ ಸೂಚಕವಾಗಿ, ಕಡಿಮೆ ಗಾತ್ರದ ಸ್ಥಳಗಳಲ್ಲಿ ತೀಕ್ಷ್ಣ ನಾದವನ್ನು ಉಂಟುಮಾಡಲು ನಾದ ಮೂಲ ಯಂತ್ರವಾಗಿಯೂ ಶಂಖಗಳು ಬಳಕೆಯಲ್ಲಿವೆ.
– ರಾಮ ಭಟ್, ಕೆನಡಾ