Advertisement

ಪೃಥ್ವಿ ಶಾ ನನ್ನ ದೇಹದ ಭಾಗಗಳನ್ನು ಸ್ಪರ್ಶಿಸಿದ್ದಾರೆ : ಸ್ವಪ್ನಾ ಗಿಲ್‌

06:38 PM Feb 22, 2023 | Team Udayavani |

ಮುಂಬೈ: ಭಾರತದ ಯುವ ಕ್ರಿಕೆಟರ್‌ ಪೃಥ್ವಿ ಶಾ ಮೇಲೆ ಮೇಲೆ ಹಲ್ಲೆ ಮತ್ತು ಅವರ ಕಾರಿನ ಮೇಲೆ ದಾಳಿ ಮಾಡಿದ ಹಿನ್ನಲೆಯಲ್ಲಿ ಭೋಜ್‌ಪುರಿ ನಟಿ ಸ್ವಪ್ನಾ ಗಿಲ್‌ ಹಾಗೂ ಇತರೆ ಮೂವರಿಗೆ 14 ದಿನಗಳ ನ್ಯಾಯಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

Advertisement

ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಸ್ವಪ್ನಾ, ಗಲಾಟೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ʻಕಳೆದ ಬುಧವಾರ ರಾತ್ರಿ ನಾನು ನನ್ನ ಸ್ನೇಹಿತರು ಘಟನಾ ಸ್ಥಳದಲ್ಲಿ  ರೀಲ್ಸ್‌ಗಾಗಿ ಡ್ಯಾನ್ಸ್‌ ಮಾಡುತ್ತಿದ್ದೆವು. ಆ ವೇಳೆ ನಾವು ಯಾರೊಂದಿಗೂ ಗಲಾಟೆ ಮಾಡಿಲ್ಲ. ಹಣಕ್ಕೂ  ಬೇಡಿಕೆ ಇಟ್ಟಿದ್ದೇವೆ ಎಂದು ಮಾದ್ಯಮಗಳು ವರದಿ ಮಾಡಿವೆ. ಆದರೆ ಅವೆಲ್ಲಾ ಸುಳ್ಳು. ಪೃಥ್ವಿ ಶಾ ನಮ್ಮ ಮೇಲೆ ಸುಳ್ಳು ಕೇಸ್‌ ದಾಖಲಿಸಿದ್ದಾರೆ. ಅವರೇ ನಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೇ ನನ್ನ ದೇಹವನ್ನು ಸ್ಪರ್ಶಿಸಿದ್ದಾರೆ. ನನ್ನ ಮೇಲೆ ಮೇಲೆ ಹಾಕಿರುವ ದೂರಿಗೆ ವಿರುದ್ಧವಾಗಿ ಇನ್ನೊಂದು ದೂರು ದಾಖಲಿಸಲು ತಯಾರಿ  ನಡೆಸಿದ್ದೇನೆʼ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next