Advertisement
‘ಆ ಫೋಟೊ ತೆಗೆದಿದ್ದು 2004ರಲ್ಲಿ. ನಾನು ಆಗಷ್ಟೇ, ‘ಶಂಕರ್ ಪೋಟ್ರ್ರೇಟ್ ಪೆವಿಲಿಯನ್’ ಎಂಬ ಫೋಟೊ ಗ್ಯಾಲರಿ ಆರಂಭಿಸಿದ್ದೆ. ಗ್ಯಾಲರಿಯಲ್ಲಿ ಸಿದ್ಧಗಂಗಾ ಸ್ವಾಮೀಜಿಗಳ ಫೋಟೊವನ್ನು ಪ್ರದರ್ಶಿಸಬೇಕೆಂದು ಆಸೆಪಟ್ಟು, ಶ್ರೀಗಳ ಫೋಟೊ ತೆಗೆಯಲು ಮಠಕ್ಕೆ ಹೋಗಿದ್ದೆ. ಆಗ ಅವರಿಗೆ 98 ವರ್ಷ. ದೇಹ ಕೂಡ ಬಾಗಿತ್ತು. ಆದರೂ, ಉತ್ಸಾಹದಿಂದಲೇ ಫೋಟೊ ತೆಗೆಯಲು ಸಹಕರಿಸಿದರು. ಮಠದಲ್ಲಿ ಅವರು ಕುಳಿತುಕೊಳ್ಳುವ ಜಾಗದಲ್ಲಿಯೇ ಕುರ್ಚಿ, ಲೈಟ್ ಎಲ್ಲ ಸೆಟ್ ಮಾಡಿ, ಆ ಫೋಟೊ ತೆಗೆಯಲು ಸುಮಾರು ಒಂದು ಗಂಟೆ ತೆಗೆದುಕೊಂಡೆ. ಶ್ರೀಗಳನ್ನು ಬೇರೆ ಬೇರೆ ಆ್ಯಂಗಲ್‌ಗಳಲ್ಲಿ ಕೂರಿಸಿ, ಬೇಕಾದಷ್ಟು ಫೋಟೊ ತೆಗೆದೆ. ಕೊನೆಗೆ, ಅವರ ಕೈಯನ್ನು ಕುತ್ತಿಗೆಗೆ ಆಧಾರವಾಗಿ ಕೊಟ್ಟು ಲೋಯರ್ ಆ್ಯಂಗಲ್‌ನಿಂದ ತೆಗೆದ ಫೋಟೊ ಅದು. ಶ್ರೀಗಳಿಗೆ ಆ ಫೋಟೊ ತುಂಬಾ ಇಷ್ಟವಾಗಿತ್ತು. ಫೋಟೊ ನೋಡಿದ ಅವರು, ನನ್ನ ಹೆಗಲ ಮೇಲೆ ಕೈ ಹಾಕಿ, ‘ಭಾರೀ ಚೆನ್ನಾಗಿ ತೆಗೆದಿದ್ದೀಯಪ್ಪಾ’ ಎಂದು ಪ್ರಶಂಸಿಸಿ, ತಮ್ಮ ಮ್ಯಾನೇಜರ್‌ಗೆ ಹೇಳಿ ಆ ಫೋಟೊವನ್ನು ಮಠದ ಸಂಸ್ಥೆಗಳಲ್ಲಿ ಫ್ರೇಮ್ ಹಾಕಿಸಿ, ಇಟ್ಟಿದ್ದರು. ಆ ಫೋಟೊ ಅಷ್ಟೊಂದು ಜನಪ್ರಿಯ ಆಗುತ್ತೆ ಎಂದು ಗೊತ್ತಿರಲಿಲ್ಲ. ಇಲ್ಲಿಯವರೆಗೆ ನಾನೇ ಆ ಫೋಟೊದ ಸಾವಿರಾರು ದೊಡ್ಡ ಪೋಟ್ರ್ರೇಟ್‌ಗಳನ್ನು ಮಾಡಿಕೊಟ್ಟಿದ್ದೇನೆ. ವಿದೇಶಗಳಲ್ಲಿಯೂ ಹಲವಾರು ಕಡೆಗಳಲ್ಲಿ ಈ ಪೋಟ್ರ್ರೇಟ್ ಇದೆ. ಜೀವಮಾನದಲ್ಲಿ ಮಹಾತ್ಮರ ಅಂಥದ್ದೊಂದು ಫೋಟೊ ತೆಗೆಯುವ ಅವಕಾಶ ಸಿಕ್ಕಿದ್ದಕ್ಕೆ ಬಹಳ ತೃಪ್ತಿ, ಹೆಮ್ಮೆ ಇದೆ ಎನ್ನುತ್ತಾರೆ ಶಂಕರ್. Advertisement
ಶ್ರೀಗಳಿಗೆ ಈ ಫೋಟೊ ತುಂಬಾ ಇಷ್ಟವಾಗಿತ್ತು’
01:00 AM Jan 23, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.