Advertisement
ರಾಜ್ಯದಲ್ಲೇ ಪ್ರಥಮವೆನಿಸಿದ ಈ ಸ್ವಾಧಾರ ಗೃಹವು ಕೇಂದ್ರ ಸರಕಾರದ ಎಲ್ಲ ಮಾನದಂಡಗಳಿಗೆ ಅನುಗುಣವಾಗಿ ರೂಪುಗೊಳ್ಳುತ್ತಿದೆ. ಶೋಷಿತ, ನಿರ್ಗತಿಕ ಮಹಿಳೆಯರು ಬದುಕು ಕಟ್ಟಿಕೊಳ್ಳಲು ನೆರವಾಗುವ ಕೌಶಲಭಿವೃದ್ಧಿ ತರಬೇತಿ ವ್ಯವಸ್ಥೆ ಇಲ್ಲಿನ ವೈಶಿಷ್ಟ್ಯ. ಪ್ರಸ್ತುತ ಮಂಗಳೂರಿನ ಜಪ್ಪಿನಮೊಗರಿನಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು 38 ಮಹಿಳೆಯರು ಆಶ್ರಯ ಪಡೆದುಕೊಂಡಿದ್ದಾರೆ. 50ರಿಂದ 75 ಮಂದಿಗೆ ಅವಕಾಶವಿದೆ.
ಲೈಂಗಿಕ ದೌರ್ಜನ್ಯ, ಕೌಟುಂಬಿಕ ಶೋಷಣೆಗೊಳಗಾದ, ನಿರ್ಗತಿಕರಾದ 18ರಿಂದ 45 ವರ್ಷದೊಳಗಿನ ಮಹಿಳೆ ಯರಿಗೆ ಗರಿಷ್ಠ 3 ವರ್ಷಗಳವರೆಗೆ ಸ್ವಾಧಾರ ಕೇಂದ್ರದಲ್ಲಿ ಉಳಿದುಕೊಳ್ಳಲು ಅವಕಾಶವಿದೆ. ಇಲ್ಲಿ ಅಗತ್ಯವಾದ ಚಿಕಿತ್ಸೆ, ಶಿಕ್ಷಣವನ್ನೂ ನೀಡಲಾಗುತ್ತದೆ. ಕೇಂದ್ರದಲ್ಲಿ ಉಳಿದುಕೊಳ್ಳಲು 5 ಡಾರ್ಮಿಟರಿಗಳಿವೆ. ಟ್ರೈನಿಂಗ್ ಹಾಲ್, ವೈದ್ಯರ ಕೊಠಡಿ, ಡೆಲಿವರಿ ರೂಮ್, ಕೌನ್ಸೆಲಿಂಗ್ ಕೊಠಡಿ, ಡೈನಿಂಗ್ ಹಾಲ್ ಮೊದಲಾದವುಗಳಿವೆ. ದೌರ್ಜನ್ಯಕ್ಕೊಳಗಾದ ಮಹಿಳೆ/ಮಗುವಿನ ಸುರಕ್ಷೆಗೆ ಗರಿಷ್ಠ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.
Related Articles
– ಪ್ರೊ| ಹಿಲ್ಡಾ ರಾಯಪ್ಪನ್, ನಿರ್ದೇಶಕರು,
ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್, ಮಂಗಳೂರು
Advertisement
ಸ್ವಾಧಾರ ಗೃಹದ ನೂತನ ಕಟ್ಟಡ ಎಂಆರ್‌ಪಿಎಲ್ ಸಿಎಸ್‌ಆರ್ ನಿಧಿಯ ನೆರವಿನೊಂದಿಗೆ ಅಂದಾಜು 2.67 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಎರಡು ತಿಂಗಳೊಳಗೆ ಸೇವೆ ಆರಂಭಿಸುವ ನಿರೀಕ್ಷೆ ಇದೆ. ಇದರ ನಿರ್ವಹಣೆಯನ್ನು ಈಗಾಗಲೇ ಸ್ವಾಧಾರ ಕೇಂದ್ರ ನೋಡಿಕೊಳ್ಳುತ್ತಿರುವ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ ಮಾಡಲಿದೆ. – ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ. ಜಿಲ್ಲೆ