Advertisement

ಸ್ವೀಪ್‌ ಕಾರ್ಯತಂತ್ರಕ್ಕೆ ಉತ್ತಮ ಸ್ಪಂದನೆ

03:37 PM Apr 19, 2019 | keerthan |

ಮಂಗಳೂರು/ಉಡುಪಿ: ಮತದಾನ ಹೆಚ್ಚಿಸುವುದಕ್ಕಾಗಿ ಚುನಾವಣ ಆಯೋಗ ನಡೆಸಿದ ವಿವಿಧ ಜಾಗೃತಿ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ದೊರಕಿದೆ.

Advertisement

ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ಈ ಹಿಂದಿನ ದಾಖಲೆಗಳನ್ನು ಈ ಬಾರಿ ಮತದಾರರು ಮುರಿದಿದ್ದಾರೆ. ಸ್ವೀಪ್‌ ವತಿಯಿಂದ ಆಯೋಜಿಸಲಾದ ವಿವಿಧ ರೀತಿಯ ಕಾರ್ಯಕ್ರಮಗಳು ಜನರಿಗೆ ತಲುಪಿರುವುದೇ ಇದಕ್ಕೆ ಕಾರಣವಾಗಿದೆ.

ಮಾಧ್ಯಮಗಳ ಮೂಲಕ ನಡೆಸಿದ ಸ್ವೀಪ್‌ ರಸಪ್ರಶ್ನೆ ಸ್ಪರ್ಧೆ, ಶಾಲಾ, ಕಾಲೇಜುಗಳಲ್ಲಿ ನಡೆಸಿದ ವಿವಿಧ ಕಾರ್ಯಕ್ರಮಗಳು, ಸ್ಪರ್ಧೆಗಳು ಮುಖ್ಯವಾಗಿ ಯುವಕರ ಮನಗೆದ್ದಿತ್ತು.  ಕ್ಯಾಂಪಸ್‌ ರಾಯಬಾರಿ ಕಾರ್ಯಕ್ರಮ ಕೂಡ ಹೆಚ್ಚಿನ ಫ‌ಲ ನೀಡಿದೆ. ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನೇ ಮತದಾನಕ್ಕೆ ರಾಯಬಾರಿಗಳನ್ನಾಗಿ ನಿಯೋಜಿಸಿ ಸಹವರ್ತಿ ಗಳನ್ನು ಮತದಾನಕ್ಕೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಇದು ಉತ್ತಮ ಫ‌ಲಿತಾಂಶ ನೀಡಿದೆ.

ಉಡುಪಿ ಜಿಲ್ಲೆಯಲ್ಲಿ ಕೂಡ ಆಯೋಗದ ವತಿಯಿಂದ ಇದೇ ರೀತಿಯ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡದಲ್ಲಿ ಸ್ವೀಪ್‌ ವತಿಯಿಂದ ಮ್ಯಾರಥಾನ್‌ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಾವಿರಾರು ಯುವ ಮತದಾರರು ಭಾಗವಹಿಸಿದ್ದರು.

ಮಾನವ ಸರಪಳಿ
ಇದೇ ಮೊದಲ ಬಾರಿಗೆ ಕರಾವಳಿಯಲ್ಲಿ ಮಾನವ ಸರಪಳಿಯನ್ನು ತಲಪಾಡಿಯಿಂದ ಸಸಿಹಿತ್ಲುವರೆಗೆ ಆಯೋಜಿಸಿಸಲಾಗಿದ್ದು, ಇದರಲ್ಲಿ ಪರಿಸರದ ಹೆಚ್ಚಿನ ಎಲ್ಲ ಜನರು ಭಾಗವಹಿಸಿ ಮತದಾನ ಮಾಡುವ ಪ್ರತಿಜ್ಞೆ ಕೈಗೊಂಡಿದ್ದರು.

Advertisement

ಸಾಮಾಜಿಕ ಜಾಲತಾಣ
ಈ ಬಾರಿಯ ಚುನಾವಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಜಾಗೃತಿ ಮೂಡಿಬಂದಿತ್ತು. ಸ್ವೀಪ್‌ ಕಾರ್ಯಕ್ರಮಗಳಿಗೆ ಪೂರಕವಾಗಿ ಯುವ ಸಮುದಾಯವು ಮತದಾನ ಮಾಡಲೇ ಬೇಕು ಎಂಬ ಮನೋಭಾವನೆಯ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಸಾರ ಮಾಡಿತ್ತು. ಇದು ಯುವ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಲು ಪ್ರೇರಣದಾಯಕವಾಯಿತು. ಇದರಿಂದಾಗಿ ಗುರುವಾರ ಬೆಳಗ್ಗೆಯೇ ಮತದಾನದಲ್ಲಿ ಭಾಗವಹಿಸಿದ ಯುವ ಸಮುದಾಯದವರು ಇದರ ಚಿತ್ರ, ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇತರರಿಗೂ ಮತದಾನದಲ್ಲಿ ಭಾಗವಹಿಸಲು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next