Advertisement
ಸುವರ್ಣಾವತಿ ಜಲಾಶಯ ಭರ್ತಿಯಾಗಲು ಕೇವಲ 5 ಇಂಚು ಬಾಕಿಯಿದ್ದ ಕಾರಣ, ಭಾನುವಾರ ಬೆಳಗಿನ ಜಾವ ನೀರು ಹೊರ ಬಿಡಲಾಯಿತು. ಮೂರು ಕ್ರೆಸ್‌ಟ್ ಗೇಟ್ ಗಳ ಪೈಕಿ 2 ಕ್ರೆಸ್‌ಟ್ ಗೇಟ್‌ಗಳ ಮೂಲಕ 450 ಕ್ಯುಸೆಕ್ ನೀರನ್ನು ನದಿಗೆ, 150 ಕ್ಯುಸೆಕ್ ನೀರನ್ನು ನಾಲೆಗೆ ಬಿಡಲಾಗಿದೆ. ನಾಲೆಗೆ ಬಿಡಲಾಗಿರುವ ನೀರು ಸುವರ್ಣಾವತಿ ವ್ಯಾಪ್ತಿಗೊಳಪಟ್ಟ 13 ಕೆರೆಗಳಿಗೆ ಹರಿಯುತ್ತಿದೆ.
Related Articles
Advertisement
ಸುವರ್ಣಾವತಿ ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ1.26 ಟಿಎಂಸಿ ಇದ್ದು, ಭಾನುವಾರ 1.2 ಟಿಎಂಸಿ ನೀರಿತ್ತು.
ಸುವರ್ಣಾವತಿ ಜಲಾಶಯದಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಚಿಕ್ಕಹೊಳೆಯ ಗರಿಷ್ಠ ಮಟ್ಟ 2,474 ಅಡಿ. ಈಗ 2,469 ಅಡಿಗಳಷ್ಟು ನೀರು ತುಂಬಿದೆ. ಇನ್ನೂ 5 ಅಡಿ ನೀರು ಹರಿದು ಬಂದರೆ ಚಿಕ್ಕಹೊಳೆ ಜಲಾಶಯವೂ ತುಂಬುತ್ತದೆ. ತಮಿಳುನಾಡಿನ ತಲಮಲೈ, ತಾಳವಾಡಿ, ಕೊಂಗಳ್ಳಿ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಈ ಜಲಾಶಯದ ಜಲಾನಯನ ಪ್ರದೇಶಗಳಾಗಿವೆ. ಈ ಭಾಗದಲ್ಲಿ ಮಳೆಯಾಗುತ್ತಿರುವ ಕಾರಣ ಚಿಕ್ಕಹೊಳೆಗೆ ನೀರು ಹರಿದುಬರುತ್ತಿದೆ. ಭಾನುವಾರ 100 ಕ್ಯುಸೆಕ್ ಒಳ ಹರಿವು ಇತ್ತು. ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳನ್ನು ಅವಳಿ ಜಲಾಶಯಗಳು ಎಂದೇ ಕರೆಯಲಾಗುತ್ತದೆ. ಚಿಕ್ಕಹೊಳೆ ಜಲಾಶಯದ ಗರಿಷ್ಠ ಸಾಮರ್ಥ್ಯ 0.37 ಟಿಎಂಸಿ (372 ದಶಲಕ್ಷ ಘನ ಅಡಿ) ಇದ್ದು, ಭಾನುವಾರ 0.29 ಟಿಎಂಸಿ ಇತ್ತು .