ಮಲ್ಪೆ: ಮಲ್ಪೆ ಸುವರ್ಣ ಕಲಾಶ್ರೀ ಯಕ್ಷಪ್ರಿಯರ ವತಿಯಿಂದ ಪ್ರಥಮ ಬಾರಿಗೆ ಮಹಿಳಾ ಕಲಾವಿದರಿಂದ ಯಕ್ಷ-ಗಾನ-ನಾಟ್ಯ-ವೈಭವ ಕಾರ್ಯಕ್ರಮವು ಜು. 16 ರಂದು ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಕೊಡವೂರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾವಿದೆ ಪೂರ್ಣಿಮಾ ಯತೀಶ್ ರೈ, ಉಡುಪಿ ಎಂಜಿಎಂ ಕಾಲೇಜಿನ ಉಪನ್ಯಾಸಕಿ ವಸುಮತಿ ಭಟ್, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಸಂಪಾದಕಿ ಯಶೋದಾ ಕೇಶವ ಉಪಸ್ಥಿತರಿದ್ದರು.
ಎಸೆಸೆಲ್ಸಿಯಲ್ಲಿ ಮಲ್ಪೆ ಪರಿಸರದ ವಿವಿಧ 4 ಶಾಲೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ಫÉವರ್ ಆಫ್ ಪ್ಯಾರಡೈಸ್‌ನ ಫಿದಾ ಶಬೀºರ್, ನಾರಾಯಣಗುರು ಶಾಲೆಯ ವೀಕ್ಷಾ, ಗಾಂಧಿ ಶತಾಬ್ದದ ವರ್ಷಿತ ಪವಿತ್ರ ಪಿ. ಸುವರ್ಣ, ಫಿಶರೀಶ್ ಶಾಲೆಯ ನಯನಾ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಸುವರ್ಣ ಕಲಾಶ್ರೀಯ ಸಂಚಾಲಕ ದಿನೇಶ್ ಸುವರ್ಣ ಕೊಡವೂರು ಸ್ವಾಗತಿಸಿದರು. ವಿಲಾಸ ಎಸ್. ಸುವರ್ಣ ವಂದಿಸಿದರು. ನಮೃತಾ ರಾಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.