Advertisement
ಈ ಬಗ್ಗೆ ರಾಜ್ಯಗಳ ಮಟ್ಟದಲ್ಲಿ ಒಂದೇ ರೀತಿಯ ವ್ಯಾಖ್ಯಾನ ಇಲ್ಲ. ಏಕೆಂದರೆ ಎಸ್‌ಯುವಿಗಳಿಗೆ ಶೇ.28 ಜಿಎಸ್‌ಟಿ ಮತ್ತು ಶೇ.22 ಸೆಸ್ ಮೂಲಕ ಶೇ.50 ತೆರಿಗೆ ಹಾಕಲಾಗುತ್ತಿದೆ. ಆದರೆ ಎಸ್‌ಯುವಿಗಳ ಬಗ್ಗೆ ಸ್ಪಷ್ಟನೆ ಇಲ್ಲದ ಕಾರಣದಿಂದಾಗಿ ಈ ತೆರಿಗೆ ವಿಧಿಸುವ ಬಗ್ಗೆ ಗೊಂದಲಗಳಿದ್ದವು. ಅವುಗಳನ್ನು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
Related Articles
Advertisement
ಕೆಲವೊಂದು ರಾಜ್ಯಗಳಲ್ಲಿ ನ್ಪೋರ್ಟ್ ಯುಟಿಲಿಟಿ ವೆಹಿಕಲ್(ಎಸ್‌ಯುವಿ) ಮತ್ತು ಮಲ್ಟಿ ಯುಟಿಲಿಟಿ ವೆಹಿಕಲ್(ಎಂಯುವಿ)ಗಳ ನಡುವಿನ ವ್ಯತ್ಯಾಸ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ರಾಜ್ಯ ಸರಕಾರಗಳೇ ಎಸ್‌ಯುವಿ ಕುರಿತಂತೆ ಸ್ಪಷ್ಟನೆ ನೀಡಬೇಕು ಎಂದು ಕೋರಿದ್ದವು. ಈಗ ಸರಕಾರ ನೀಡಿರುವ ಸ್ಪಷ್ಟನೆಯಿಂದಾಗಿ ಎಲ್ಲ ಎಸ್‌ಯುವಿಗಳಿಗೂ ಒಂದೇ ರೀತಿಯ ತೆರಿಗೆ ವಿಧಿಸಬೇಕಾಗಿಲ್ಲ. ಅಂದರೆ ಸರಕಾರ ನಿಗದಿ ಮಾಡಿರುವ 1,500 ಸಿಸಿಗಿಂತ ಕಡಿಮೆ ಸಾಮರ್ಥ್ಯದ, 4,000 ಎಂಎಂಗಿಂತ ಕಡಿಮೆ ಉದ್ದವಿರುವ ಮತ್ತು 170 ಎಂಎಂಗಿಂತ ಕಡಿಮೆ ಗ್ರೌಂಡ್ ಕ್ಲಿಯರೆನ್ಸ್ ಇರುವ ವಾಹನಗಳಿಗೆ ಕಡಿಮೆ ತೆರಿಗೆ ವಿಧಿಸಬಹುದಾಗಿದೆ. ಹೀಗಾಗಿ ಕಂಪ್ಯಾಕ್ಟ್ ಮತ್ತು ಸಬ್ ಕಂಪ್ಯಾಕ್ಟ್ ವಾಹನಗಳು ಈ ಎಸ್‌ಯುವಿ ತೆರಿಗೆಯ ಹೊರಗೆ ಉಳಿಯುತ್ತವೆ.
ಯಾವ ಕಾರುಗಳಿಗೆ ವಿನಾಯಿತಿ? :
ಕ್ರೆಟಾ, ಸೆಲ್ಟೋಸ್, ಕುಷ್ಕ್, ತೈಗನ್, ಆಸ್ಟರ್, ಗ್ರಾಂಡ್ ವಿಟಾರಾ ಮತ್ತು ಅರ್ಬನ್ ಕ್ರೂéಸರ್ ಹೈರಿಂಡೆರ್ ಎಸ್‌ಯುವಿ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತವೆ. ಇವುಗಳ ಉದ್ದ 4,000 ಎಂಎಂ ಇದ್ದರೂ ಎಂಜಿನ್ ಸಾಮರ್ಥ್ಯ ಕಡಿಮೆ ಇರುವುದರಿಂದ ಹೆಚ್ಚಿನ ತೆರಿಗೆ ವಿಧಿಸಲಾಗುವುದಿಲ್ಲ.