Advertisement

ಸುಸ್ಥಿರ ಅಭಿವೃದ್ಧಿ: ರಾಜ್ಯಕ್ಕೆ 6ನೇ ಸ್ಥಾನ

11:50 PM Jan 08, 2021 | Team Udayavani |

ಬೆಂಗಳೂರು, ಜ. 8: 2030ರೊಳಗೆ ರಾಜ್ಯದ ಪ್ರಗತಿ ಸಾಧಿಸುವ ಸಲುವಾಗಿ ಎಲ್ಲ 17 ಸುಸ್ಥಿರ ಗುರಿ ಸಾಧಿಸಲು ಸೂಕ್ತ ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.  ಯಡಿಯೂರಪ್ಪ ತಿಳಿಸಿದ್ದಾರೆ.

Advertisement

ವಿಧಾನಸೌಧ ಸಭಾಂಗಣದಲ್ಲಿ ನಡೆದ ಪ್ರಥಮ ಯೋಜನಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಸುಸ್ಥಿರ ಅಭಿವೃದ್ಧಿಯಲ್ಲಿ ರಾಜ್ಯ 100ಕ್ಕೆ 66 ಅಂಕಗಳೊಂದಿಗೆ ದೇಶದಲ್ಲಿ 6ನೇ ಸ್ಥಾನದ

ಲ್ಲಿದೆ. ಬಡತನ ಮುಕ್ತ, ಹಸಿವು ಮುಕ್ತ, ಲಿಂಗ ಸಮಾನತೆ, ಕೈಗಾರಿಕೆ, ನಾವೀನ್ಯ ಮತ್ತು ಮೂಲ ಸೌಕರ್ಯ ಹಾಗೂ ಸುಸ್ಥಿರ ನಗರಗಳು ಮತ್ತು ಸಮುದಾಯಗಳೆಂಬ ಆರು ಗುರಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಬೇಕಿದೆ ಎಂದರು. ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯ ಪ್ರಮುಖ ತೀರ್ಮಾನಗಳು :

  • ಕರಾವಳಿ ಜಿಲ್ಲೆಗಳ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ರೂಪಿಸಿ ಮತ್ಸ್ಯ ಸಂಪದ ಯೋಜನೆಯಡಿ ಆತ್ಮನಿರ್ಭರ ಯೋಜನೆಯ ಅನುದಾನ ಬಳಕೆ.
  • ಪ್ರತಿ ಗ್ರಾ.ಪಂ.ನಲ್ಲಿ 1ರಿಂದ 10ನೇ ತರಗತಿ ವರೆಗೆ 1 ಸ್ಮಾರ್ಟ್‌ ಶಾಲೆ.
  • ಸ್ಮಾರ್ಟ್‌ ಸಿಟಿ ರೀತಿಯಲ್ಲಿ ಅಂತರ್‌ ಜಲ ಹೆಚ್ಚಳಕ್ಕೆ ಸ್ಪಾಂಜ್‌ ಸಿಟಿ ಪರಿಕಲ್ಪನೆ ಬೆಳೆಸುವುದು.
  • ಕರ್ನಾಟಕ ರಾಜ್ಯ ಯೋಜನಾ ಮಂಡಳಿಯನ್ನು ಕರ್ನಾಟಕ ರಾಜ್ಯನೀತಿ ಮತ್ತು ಯೋಜನೆ ಆಯೋಗವೆಂದು ಮರು ನಾಮಕರಣ.
  • 5 ತಾಂತ್ರಿಕ ವಿಭಾಗಗಳಿಗೆ ಅನುಮೋದನೆ, 3 ರಿಸರ್ಚ್‌ ಆಫೀಸರ್‌ ಹುದ್ದೆ.
  • ರಾಜ್ಯದ ಸಮಗ್ರ ಮಾಹಿತಿ ನೀಡುವ ಸಿಎಂ ಡ್ಯಾಶ್‌ ಬೋರ್ಡ್‌ ಅಭಿವೃದ್ಧಿ.
  • ಪ್ರಾದೇಶಿಕ ಸಮತೋಲನೆಗಾಗಿ  114 ತಾಲೂಕುಗಳಿಗೆ ಹೆಚ್ಚಿನ ಒತ್ತು.
  • ಬಡವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ಏಕಗವಾಕ್ಷಿ ವ್ಯವಸ್ಥೆ.
  • ಗ್ರಾಮ ಮಟ್ಟದಲ್ಲಿ ಗ್ರಾಮ ಅಭಿವೃದ್ಧಿ ಯೋಜನೆ.
  • ಆದಿವಾಸಿ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ 600 ಕೋ. ರೂ.ಎಂಎಸ್‌ಎಂಇ ಪುನಶ್ಚೇತನಗೊಳಿಸಲು ಐಸೆಕ್‌ ವತಿಯಿಂದ ವರದಿ.
  • ರಾಜ್ಯದ ವಿವಿ ಮತ್ತು ಕಾಲೇಜುಗಳಲ್ಲಿ ಎಸ್‌ಡಿಸಿ ಔಟ್‌ರೀಚ್‌ ಕೇಂದ್ರ.
  • ಬೆಂಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಕರ್ನಾಟಕ ವಿಜ್ಞಾನನಗರ ಸ್ಥಾಪನೆ.
  • ಆಯವ್ಯಯದಲ್ಲಿ ಯೋಜನೆಗಳಿಗೆ ನಿಗದಿಪಡಿಸಿದ ಒಟ್ಟು ಅನುದಾನದಲ್ಲಿ ಶೇ. 1ರಷ್ಟು ಕರ್ನಾಟಕ ಇನ್ನೋವೇಶನ್‌ ಕಾರ್ಯಕ್ರಮಗಳಿಗೆ ಮೀಸಲು.
  • 100 ಕೋ.ರೂ.  ಅನುದಾನದ ಯೋಜನೆಗಳ ಮೌಲ್ಯಮಾಪನ.
  • 1 ಕೋ.ರೂ.ಗಿಂತ ಕಡಿಮೆ ಯೋಜನೆ ದೊಡ್ಡ ಯೋಜನೆ ಜತೆ ವಿಲೀನ.
  • ನೀರಾವರಿ ಆಯೋಗ ಸ್ಥಾಪಿಸುವುದು.
  • ವನ ತೋಟಗಾರಿಕೆ ಯೋಜನೆಗೆ ಆದ್ಯತೆ.
  • ಪಿಪಿಪಿ ಮಾದರಿಯಲ್ಲಿ ರಾಜ್ಯಕ್ಕೆ ಒಂದು ಕೌಶಲ ವಿವಿ ಸ್ಥಾಪನೆ.
  • ಮುಂಬಯಿ,ದಿಲ್ಲಿ ಮಾದರಿಯಲ್ಲಿ ಬೆಂಗಳೂರು ಮಾನವಾಭಿವೃದ್ಧಿ ವರದಿ.
  • ಕೇಂದ್ರ ಪುರಸ್ಕೃತ ಯೋಜನೆಗಳ ಪಾಲನ್ನು ಶೇ. 8ಕ್ಕಿಂತ ಹೆಚ್ಚಿಸಲು ಕ್ರಮ.

ರಾಜ್ಯದಲ್ಲಿ 1800 ಯೋಜನೆಗಳಿವೆ. ಅವುಗಳಲ್ಲಿ 300ಕ್ಕೂ ಹೆಚ್ಚು ಯೋಜನೆಗಳಿಗೆ 1ಕೋಟಿಗೂ ಕಡಿಮೆ ಬಜೆಟ್‌ ಇದೆ. ಅಂತಹ ಯೋಜನೆಗಳನ್ನು ಬೇರೆ ಯೋಜನೆಗಳ ಜತೆ ವಿಲೀನ ಮಾಡಲಾಗುವುದು. ಆತ್ಮ ನಿರ್ಭರ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.ಡಾ| ಶಾಲಿನಿ ರಜನೀಶ್‌,  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಯೋಜನಾ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next