Advertisement
ಕೋವಿಡ್ ಪರಿಕ್ಷೆಯಲ್ಲಿ ಭಾರೀ ಗೋಲ್‌ಮಾಲ್ ಆಗುತ್ತಿದೆ. ಹಣ ಮಾಡಲು ಕೋವಿಡ್ ಸಂಖ್ಯೆ ಹೆಚ್ಚಿಸುತ್ತಿದ್ದಾರೆ ಎಂಬ ಸಂಶಯಗಳು ಜನರಲ್ಲಿವೆ. ಈ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ. ಕೋವಿಡ್ ವಿಚಾರದಲ್ಲಿ ಯಾರಿಗೂ ಯಾವುದೇ ಕಮಿಷನ್ ಸಿಗುವುದಿಲ್ಲ. ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದರು.
ಕೊರೊನಾ ಪರೀಕ್ಷೆ ಹೆಚ್ಚಳದಿಂದ ಪಾಸಿಟಿವ್ ಇದ್ದವರ ಸೋಂಕು ಮತ್ತಷ್ಟು ಜನರಿಗೆ ಹಬ್ಬುವುದು ತಪ್ಪುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ದಂಧೆ ವಿಚಾರ ಸತ್ಯಕ್ಕೆ ದೂರವಾದುದು. ಕೊರೊನಾ ವಿಚಾರದಲ್ಲಿ ಭ್ರಷ್ಟಾಚಾರ ನಿಜವಾಗಿದ್ದರೆ ಸೂಕ್ತ ದಾಖಲೆಗಳನ್ನು ಸಂಬಂಧಪಟ್ಟವರಿಗೆ ನೀಡಿ ತನಿಖೆಗೆ ಒತ್ತಾಯಿಸಬಹುದು. ಆರೋಗ್ಯಇಲಾಖೆಯ ಸಿಬಂದಿ ಕಳೆದ 6 ತಿಂಗಳಿನಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿನಾಕಾರಣ ಆರೋಪದಿಂದ ಅವರ ಮಾನಸಿಕ ಸ್ಥೈರ್ಯಕ್ಕೆ ಧಕ್ಕೆ ತಂದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.