ನವದೆಹಲಿ: ಸುಮಾರು 34 ವರ್ಷಗಳ ಹಿಂದೆ ರಸ್ತೆಯಲ್ಲಿ ವೃದ್ಧರೊಬ್ಬರಿಗೆ ಹೊಡೆದು ಅವರ ಸಾವಿಗೆ ಕಾರಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಾಗಲು ಎರಡು ವಾರಗಳ ಕಾಲ ಕಾಲಾವಕಾಶ ಕೊಡಬೇಕೆಂದು ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಸುಳ್ಳಿನ ಕೆಸರಿನಲ್ಲಿ ಅರಳಿರುವ ಕಮಲಕ್ಕೆ ಜನರಿಂದ ತಕ್ಕ ಪಾಠ: ಎಚ್. ಆಂಜನೇಯ
34 ವರ್ಷಗಳ ಹಿಂದೆ ರಸ್ತೆಯಲ್ಲಿ ವೃದ್ಧರೊಬ್ಬರಿಗೆ ಹೊಡೆದು ಅವರ ಸಾವಿಗೆ ಕಾರಣವಾಗಿದ್ದ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧುಗೆ ಸುಪ್ರೀಂಕೋರ್ಟ್ ಗುರುವಾರ ಒಂದು ವರ್ಷ ಜೈಲುಶಿಕ್ಷೆ ವಿಧಿಸಿ, ಕೂಡಲೇ ಶರಣಾಗುವಂತೆ ಸೂಚಿಸಿತ್ತು.
ನವಜೋತ್ ಸಿಂಗ್ ಸಿಧು ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು ಇಂದು ಸುಪ್ರೀಂಕೋರ್ಟ್ ಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಶರಣಾಗತಿಯ ಬಗ್ಗೆ ಚೀಫ್ ಜಸ್ಟೀಸ್ ಎನ್ ವಿ ರಮಣ ಅವರನ್ನು ಸಂಪರ್ಕಿಸುವಂತೆ ಜಸ್ಟೀಸ್ ಎಎಂ ಖಾನ್ವಿಲ್ಕರ್ ತಿಳಿಸಿರುವುದಾಗಿ ವರದಿ ವಿವರಿಸಿದೆ.
Related Articles
ಹಲ್ಲೆ ಪ್ರಕರಣದಲ್ಲಿ ಒಂದು ವರ್ಷ ಕಠಿಣ ಶಿಕ್ಷೆಗೆ ಒಳಗಾಗುವಂತೆ ಸುಪ್ರೀಂಕೋರ್ಟ್ ನವಜೋತ್ ಸಿಧುಗೆ ಆದೇಶ ಕೊಟ್ಟಿತ್ತು. ಸಿಧು ಅವರ ಮವನಿಗೆ ಪಂಜಾಬ್ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಈಗಾಗಲೇ 34 ವರ್ಷ ಕಳೆದು ಹೋಗಿದೆ. ಈಗ ತೀರ್ಪು ಹೊರಬಿದ್ದಿದೆ. ಆದರೂ ಸಿಧುಗೆ ಮೂರು, ನಾಲ್ಕು ವಾರಗಳ ಕಾಲಾವಶ ಅಗತ್ಯವಿದೆ ಎಂದು ಹೇಳುವುದು ಸಮರ್ಪಕವಲ್ಲ ಎಂದು ವಾದಿಸಿದ್ದರು.