Advertisement

Kasaragod ಸೇನಾ ವೇಷದಲ್ಲಿ ಶಂಕಿತ ನಕ್ಸಲರು: ವ್ಯಾಪಕ ಪೊಲೀಸ್‌ ಕಾರ್ಯಾಚರಣೆ

12:02 AM Nov 25, 2023 | Team Udayavani |

ಕಾಸರಗೋಡು: ಕಣ್ಣೂರು ಜಿಲ್ಲೆಯ ಕೇಳಗಂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಬುಡಕಟ್ಟು ಜನಾಂಗದವರು ವಾಸ ವಾಗಿ ರುವ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆಯ ಸಮವಸ್ತ್ರವನ್ನು ಹೋಲುವ ವಸ್ತ್ರ ಧರಿಸಿದ ಶಂಕಿತ ನಕ್ಸಲರ ತಂಡ ಕಂಡುಬಂದಿದೆ.

Advertisement

ಕನ್ನಡ ಮತ್ತು ತಮಿಳು ಮಿಶ್ರಿತ ಮಲಯಾಳ ಭಾಷೆಯಲ್ಲಿ ಮಾತನಾಡುವ ಅವರು ಆ ಪ್ರದೇಶದ ಮನೆ ಮಾಲಕನೋರ್ವನ ಬಳಿ ಬಂದು ನಿನ್ನ ಮನೆಯಲ್ಲಿ ನಮಗೆ ಏನಾದರೂ ಆಹಾರ ಸಿಗಬಹುದೇ ಎಂದು ಕೇಳಿದ್ದರು. ಆದರೆ ಆ ವ್ಯಕ್ತಿ ತನ್ನ ಮನೆ ಅಲ್ಲಿಂದ ತುಂಬಾ ದೂರದಲ್ಲಿರುವುದಾಗಿ ಹೇಳಿದಾಗ ಅಪರಿಚಿತರು ಅಲ್ಲಿಂದ ಜಾಗ ಖಾಲಿ ಮಾಡಿದ್ದರು. ಈ ಬಗ್ಗೆ ಪರಿಸರದ ನಿವಾಸಿಗಳು ತತ್‌ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅದರಂತೆ ಪೊಲೀಸರು ಮತ್ತು ನಕ್ಸಲ್‌ ನಿಗ್ರಹ ಪಡೆ (ತಂಡರ್‌ ಬೋಲ್ಟ್) ಆ ಪ್ರದೇಶವನ್ನಿಡೀ ಜಾಲಾಡಿದರೂ ನಕ್ಸಲರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಕೇಳಗಕ್ಕೆ ಬಂದ ಶಂಕಿತ ನಕ್ಸಲರ ಕೈಯಲ್ಲಿ ಬಟ್ಟೆಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಕೋವಿಗಳು ಇತ್ತೆಂದೂ ಸಂಶಯಿಸಲಾಗಿದೆ. ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನವಕೇರಳ ಯಾತ್ರೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಕಣ್ಣೂರು-ಕೊಡಗು ಜಿಲ್ಲೆಯ ಗಡಿಯಲ್ಲಿ ಕೆಲವು ದಿನಗಳ ಹಿಂದೆ ಪೊಲೀಸರು ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಕೆಲವು ನಕ್ಸಲರು ಗಾಯಗೊಂಡಿದ್ದರು. ಇಬ್ಬರನ್ನು ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next