Advertisement

ಕೋತಿಗಳ ಅನುಮಾನಾಸ್ಪದ ಸಾವು..!

12:21 PM Dec 01, 2021 | Team Udayavani |

ಬೆಂಗಳೂರು: ಇಲ್ಲಿನ ಬಸವೇಶ್ವರ ನಗರ ಅಪಾರ್ಟ್‌ಮೆಂಟ್‌ವೊಂದರ ಬಳಿ ಮತ್ತೆ ಎರಡು ಕೋತಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಹಿಂದೆ ಜುಲೈ ಒಂದೇ ತಿಂಗಳಲ್ಲಿ ಹತ್ತು ಕೋತಿಗಳು ಮೃತಪಟ್ಟಿದ್ದವು. ಈಗ ಮತ್ತೆ ಎರಡು ಕೋತಿಗಳು ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಇದು ಎಡೆಮಾಡಿಕೊಟ್ಟಿದೆ.

Advertisement

ಭಾನುವಾರ ಸಂಜೆ ಬಸವೇಶ್ವರನಗರದ ಅಪಾರ್ಟ್‌ಮೆಂಟ್‌ನ ಸಜ್ಜಾದ ಮೇಲೆ ಕೋತಿಯೊಂದು ಸತ್ತಿರುವುದು ಕಂಡುಬಂದಿದೆ. ಬಳಲಿದಂತೆ ಓಡಾಡುತ್ತಿದ್ದ ಮತ್ತೂಂದು ಕೋತಿ ಮಂಗಳವಾರ ಸಾವನ್ನಪ್ಪಿದೆ. ಸ್ಥಳೀಯರ ದೂರಿನ ಮೇರೆಗೆ ಪಾಲಿಕೆ ಅರಣ್ಯ ವಿಭಾಗದ ಸಿಬ್ಬಂದಿ ಎರಡೂ ಕೋತಿಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಹೆಬ್ಟಾಳದ ಪಶುವೈದ್ಯಕೀಯ ಕಾಲೇಜಿಗೆ ಕಳುಹಿಸಿ ದ್ದಾರೆ.

ಈ ಮಧ್ಯೆ ಘಟನೆಗಳು ಪುನರಾವರ್ತನೆ ಆಗುತ್ತಿರುವುದು ಅನುಮಾನಗಳಿಗೆ ಕಾರಣವಾಗಿದ್ದು, ನಗರದಲ್ಲಿ ಕೋತಿ ಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಕೆಲವರು ವಿಷಹಾರ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಪ್ರಾಣಿಗಳಿಗೆ ಯಾರು ಮತ್ತು ಯಾಕೆ ವಿಷ ಹಾಕುತ್ತಿದ್ದಾರೆ ಎಂಬುದು ನಿಗೂಢವಾಗಿದೆ.

ಇದನ್ನೂ ಓದಿ;-  ಮಣಿಪಾಲ: ಹಲ್ಲೆಗೊಳಗಾದ ಗೋರಕ್ಷಕರ ಆರೋಗ್ಯ ವಿಚಾರಿಸಿದ ಗೃಹ ಸಚಿವರು

ಯಾರೊಬ್ಬರೂ ದೂರು ಕೂಡ ದಾಖಲಿಸಿಲ್ಲ. ಯಾರಾದರೂ ದೂರು ನೀಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾಡುಮಲ್ಲೇಶ್ವರ ವಲಯ ಅರಣ್ಯ ಅಧಿಕಾರಿ ತಿಳಿಸಿದರು.

Advertisement

ಹಳಸಿದ ಆಹಾರವೂ ವಿಷವೇ: ಕೋತಿಗಳು ಅಪಾರ್ಟ್‌ಮೆಂಟ್‌ಗಳಲ್ಲಿ ಆಹಾರ ಅರಸಿಕೊಂಡು ಹೋಗುತ್ತವೆ. ಆಗ ಎರಡು ಮೂರು ದಿನಗಳ ಹಿಂದಿನ ಆಹಾರ ಹಾಕಿದಲ್ಲಿ ಅಥವಾ ಆಹಾರವಿಟ್ಟು ಮೂರ್‍ನಾಲ್ಕು ದಿನಗಳ ನಂತರ ಕೋತಿಗಳು ಸೇವಿಸಿದಲ್ಲಿ ಅದು ವಿಷವಾಗಿ ಪರಿಣಮಿಸುತ್ತದೆ. ಇದರಿಂದಲೂ ಸಾವನ್ನಪ್ಪುವ ಸಾಧ್ಯತೆಯಿದ್ದು, ಈ ಬಗ್ಗೆ ಮರಣೋತ್ತರ ಪರೀಕ್ಷೆ ನಂತರ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಕೋತಿಗಳಿದ್ದು, ಅವುಗಳನ್ನು ಒಂದೆಡೆ ಬಿಡಲು ಕೋತಿಗಳ ಉದ್ಯಾನ ನಿರ್ಮಿಸಲು ಬಿಬಿಎಂಪಿ ಚಿಂತನೆ ನಡೆಸಿತ್ತು. ಆದರೆ, ಸರ್ಕಾರದಿಂದ ಇದಕ್ಕೆ ಹಸಿರುನಿಶಾನೆ ಸಿಗದ ಹಿನ್ನೆಲೆಯಲ್ಲಿ ಕೋತಿಗಳ ಉದ್ಯಾನ ನಿರ್ಮಾಣದ ಕಾರ್ಯ ನೆನಗುದಿಗೆ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next