Advertisement

ಮಹಿಳಾ ಕರ್ನಲ್‌ಗೆ ಬೆದರಿಕೆ: ಶಂಕಿತ ಐಎಸ್‌ಐ ಏಜಂಟ್‌ ಸೆರೆ

11:35 AM Sep 19, 2017 | udayavani editorial |

ಹೊಸದಿಲ್ಲಿ : ಮಹಿಳಾ ಕರ್ನಲ್‌ ಒಬ್ಬರಿಗೆ ರಹಸ್ಯ ದಾಖಲೆಪತ್ರಗಳನ್ನು ಕೊಡುವಂತೆ ಬೆದರಿಕೆ ಹಾಕಿದ ಪಾಕಿಸ್ಥಾನದ ಶಂಕಿತ ಐಎಸ್‌ಐ ಏಜಂಟ್‌ ನನ್ನು ದಿಲ್ಲಿ ಪೊಲೀಸ್‌ ವಿಶೇಷ ದಳದವರು ಬಂಧಿಸಿದ್ದಾರೆ.

Advertisement

ಬಂಧಿತ ಶಂಕಿತ ಐಎಸ್‌ಐ ಏಜಂಟ್‌ನನ್ನು ಮೊಹಮ್ಮದ್‌ ಪರ್ವೇಜ್‌ ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ ಈ ಶಂಕಿತ ಪಾಕ್‌ ಐಎಸ್‌ಐ ಏಜಂಟನು ಮಹಿಳಾ ಕರ್ನಲ್‌ಗೆ, ರಹಸ್ಯ ದಾಖಲೆಪತ್ರಗಳನ್ನು ತನಗೆ ಕೊಡುವಂತೆ, ಇಲ್ಲದಿದ್ದರೆ ಆಕೆಯ ತಿರುಚಿದ ಫೋಟೋಗಳನ್ನು ತಾನು ಸಾಮಾಜಿಕ ಜಾಲ ತಾಣಕ್ಕೆ ಹಾಕುವ ಬೆದರಿಕೆಯನ್ನು ಒಡ್ಡಿದ್ದ.  

ಕಳೆದ ಸೆ.13ರಂದು ಮಹಿಳಾ ಕರ್ನಲ್‌ ಪೊಲೀಸರಿಗೆ ದೂರು ನೀಡಿದ್ದಳು. ಆ ಪ್ರಕಾರ ದಿಲ್ಲಿ ಪೊಲೀಸ್‌ ವಿಶೇಷ ದಳದವರು ಶಂಕಿತ ಏಜಂಟ್‌ನನ್ನು ಸೆರೆ ಹಿಡಿದರು. 

Advertisement

Udayavani is now on Telegram. Click here to join our channel and stay updated with the latest news.

Next