Advertisement

ಪುಲ್ವಾಮಾ: ಸುಧಾರಿತ ಸ್ಫೋಟಕ ಸಾಧನ ಪತ್ತೆ; ನಾಶಪಡಿಸಿದ ಬಾಂಬ್ ನಿಷ್ಕ್ರಿಯ ದಳ

08:49 PM Jul 12, 2022 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶಂಕಿತ ಐಇಡಿ(ಸುಧಾರಿತ ಸ್ಫೋಟಕ ಸಾಧನ) ಬಾಂಬ್‌ ಒಂದನ್ನು ಮಂಗಳವಾರದಂದು ಭದ್ರತಾ ಪಡೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ನಿಷ್ಕ್ರಿಯಗೊಳಿಸಿದ್ದಾರೆ.

Advertisement

ಪುಲ್ವಾಮಾ ಚೌದ್ರಿಬಾಗ್‌ ರಸ್ತೆಯ ಬಳಿ ಸಿಲಿಂಡರ್‌ ಒಂದಕ್ಕೆ ಸುಮಾರು 5ಕೆ.ಜಿ. ತೂಕದಷ್ಟು ಸಿಡಿಮದ್ದನ್ನು ಕಟ್ಟಿದ್ದು ಕಂಡುಬಂದಿದೆ.

ಈ ಬಗ್ಗೆ ಭದ್ರತಾ ಪಡೆಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಬಂದ ಪಡೆಯು ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸುವಲ್ಲಿ ಸಫ‌ಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next