Advertisement

‘ಚೌಚೌ ಬಾತ್‌’ನಲ್ಲಿ ರೊಮ್ಯಾಂಟಿಕ್ ಡ್ರಾಮಾ

04:37 PM Mar 30, 2023 | Team Udayavani |

‘ಚೌಚೌ ಬಾತ್‌’- ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಬಿಝಿಯಾಗಿದೆ. ಈ ಹಿಂದೆ “ಪ್ರೇಮ ಗೀಮ ಜಾನೆ ದೋ’ ಹಾಗೂ “ದೇವರು ಬೇಕಾಗಿದ್ದಾರೆ’ ಸಿನಿಮಾಗಳನ್ನು ಮಾಡಿರುವ ಕೆಂಜ ಚೇತನ್‌ ಕುಮಾರ್‌ ಈ ಸಿನಿಮಾದ ನಿರ್ದೇಶಕರು.

Advertisement

ಈ ಬಾರಿ ಪಕ್ಕಾ ವಿಭಿನ್ನ ಕಥೆಯೊಂದಿಗೆ ಸಿನಿಮಾ ಮಾಡಿದ್ದಾರೆ. ಕನ್ನಡಕ್ಕೆ ಹೊಸ ಜಾನರ್‌ ಆಗಿರುವ ಹೈಪರ್‌ ಲಿಂಕ್‌ ರೊಮ್ಯಾಂಟಿಕ್‌ ಕಾಮಿಡಿ ಡ್ರಾಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೂರು ಕಥೆಗಳು ಸಿನಿಮಾದಲ್ಲಿ ಜೊತೆ ಜೊತೆಯಾಗಿ ಸಾಗಿಬರಲಿದೆ.

ಅಂತಿಮವಾಗಿ ಈ ಮೂರು ಕಥೆಗಳು ಒಂದಾಗಲಿದೆ. ಈ ಚಿತ್ರವನ್ನು ಹಾರಿಜಾನ್‌ ಮೂವೀಸ್‌, ಸನಾತನೈ ಪಿಕ್ಚರ್ ಸೇರಿ ನಿರ್ಮಿಸಿದೆ. ನಿರ್ಮಾಣದಲ್ಲಿ ಓಂ ಸ್ಟುಡಿಯೋಸ್‌ನ ಅವಿನಾಶ್‌ ಶೆಟ್ಟಿ, ಸತೀಶ್‌ ಸಾಥ್‌ ನೀಡಿದ್ದಾರೆ. ಚಿತ್ರದಲ್ಲಿ ಸುಷ್ಮಿತಾ ಭಟ್‌, ಪ್ರಕರ್ಷ ಶಾಸ್ತ್ರಿ, ಗೀತಾ ಬಂಗೇರ, ಸಾಗರ್‌ ಗೌಡ, ಧನುಶ್‌, ಸಂಕಲ್ಪ, ಅರುಣಾ ಬಾಲರಾಜ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

ಇಂದಿನ ಟ್ರೆಂಡ್‌ ಅನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಚಿತ್ರ ಇದಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಚಿತ್ರಕ್ಕೆ ಹೇಮಂತ್‌ ಸಂಗೀತ, ರುದ್ರಮುನಿ ಛಾಯಾಗ್ರಹಣವಿದೆ

Advertisement

Udayavani is now on Telegram. Click here to join our channel and stay updated with the latest news.

Next