Advertisement
1999ರಲ್ಲಿ ಸುಷ್ಮಾ ಅವರು ಸೋನಿಯಾ ಗಾಂಧಿ ವಿರುದ್ಧಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವೇಳೆ ಕಲಿತ ಕನ್ನಡ ಕೆಲವೇ ದಿನಗಳಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಪ್ರಯೋಜನಕ್ಕೆ ಬಂತು. ಆಗ ಉಡುಪಿಯ ಚಿತ್ತರಂಜನ್ ಸರ್ಕಲ್ ಮತ್ತು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಸಭೆಗಳಲ್ಲಿ ಅವರು ಕನ್ನಡದಲ್ಲಿ ಮಾತನಾಡಿದ್ದರು.
Related Articles
Advertisement
ಅಷ್ಟಮಿ ಉಂಡೆ, ಪತ್ರೊಡೆ ಇಷ್ಟಸುಷ್ಮಾ ಅವರಿಗೆ ಅಷ್ಟಮಿ ಉಂಡೆ, ಪತ್ರೊಡೆ ಇಷ್ಟವಾಗಿತ್ತು. ಉಡುಪಿ ಯಿಂದ ದಿಲ್ಲಿಗೆ ಮರಳು ವಾಗ ಅವು ಗಳನ್ನು ಕಳುಹಿಸಿಕೊಟ್ಟಿದ್ದೆ. ಹಾಗೆಯೇ ಇಡ್ಲಿ ಸಾಂಬಾರ್, ಮಸಾಲೆ ದೋಸೆ, ಮಲ್ಲಿಗೆ ಹೂವು, ಉಡುಪಿ ಕೈಮಗ್ಗದ ಸೀರೆಗಳೂ ಪ್ರಿಯವಾಗಿದ್ದವು ಎಂದು ಸ್ಮರಿಸಿಕೊಳ್ಳುತ್ತಾರೆ ಉಡುಪಿಯ ಹಿರಿಯ ಬಿಜೆಪಿ ಕಾರ್ಯಕರ್ತೆ ಕಿರಣ ಕಾಮತ್. ಮೃತದೇಹ ಹಸ್ತಾಂತರಕ್ಕೆ ನೆರವು
ಬಾರ್ಸಿಲೋನಾ ಪ್ರವಾಸಕ್ಕೆ ತೆರಳಿದ್ದ ಕುಂದಾಪುರ ಮೂಲದ ಮೀರಾ ಪ್ರವಾಸಿ ಹಡಗಿನಲ್ಲಿ ಮೃತಪಟ್ಟಿದ್ದರು. ಆಗ ಅವರ ಪಾರ್ಥಿವ ಶರೀರವನ್ನು ಕ್ಷಿಪ್ರವಾಗಿ ಸ್ವದೇಶಕ್ಕೆ ತರುವುದಕ್ಕೂ ಸುಷ್ಮಾ ಸ್ವರಾಜ್ ನೆರವಾಗಿದ್ದರು. ತ್ವರಿತ ಸ್ಪಂದನೆ
ಸುಷ್ಮಾರನ್ನು ಎಲ್ಲರೂ ನೆನಪು ಮಾಡಿಕೊಳ್ಳುವುದು ವಿದೇಶ
ದಲ್ಲಿ ಭಾರತೀಯ ಮೂಲದ ವರು ತೊಂದರೆಗೊಳಗಾದರೆ ತತ್‌ಕ್ಷಣ ಸ್ಪಂದಿಸುತ್ತಿದ್ದುದಕ್ಕೆ. ಕಳೆದ ಮಾರ್ಚ್‌ನಲ್ಲಿ ಬಸೂÅರು ಮೂಲದ ಪ್ರಶಾಂತ್ ಹತ್ಯೆ ಪ್ರಕರಣದಲ್ಲಿಯೂ ಸರಣಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಲ್ಲದೆ, ಕುಟುಂಬಿಕರಿಗೆ ವಿದೇಶಕ್ಕೆ ತೆರಳಲು ಅನುಕೂಲ ಮಾಡಿಕೊಟ್ಟಿದ್ದರು. “ಕಾಕಡಿ’ ಕೇಳಿ ಪಡೆದರು
2009ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಕ್ಕೆ ಬರುವಾಗ ಕಟೀಲು ಪೇಟೆಯಲ್ಲಿ ಸುಷ್ಮಾ ಸ್ವರಾಜ್ ಒಮ್ಮೆಲೆ ವಾಹನ ನಿಲ್ಲಿಸಿ “ಕಾಕಡಿ ಬೇಕು’ ಎಂದರು. ಅದೇನೆಂದು ಗೊತ್ತಾಗದೆ ಕಾರ್ಯಕರ್ತರು ಗಲಿಬಿಲಿಯಾಗಿ ಸೌತೆ, ಹೀರೆ, ಬೆಂಡೆ ತಂದಾಗ ಮುಳ್ಳುಸೌತೆ ತೋರಿಸಿ ಅದು ಬೇಕು ಎಂದರು. ಆ ದೃಶ್ಯವನ್ನು ನಾವೆಂದೂ ಮರೆಯುವಂತಿಲ್ಲ ಎನ್ನುತ್ತಾರೆ ಆಗ ಜತೆಗಿದ್ದ ಶಾಸಕ ರಘುಪತಿ ಭಟ್ ಮತ್ತು ಸುವರ್ಧನ ನಾಯಕ್. ಸದಾ ಸ್ಮರಣಾರ್ಹ ತ್ವರಿತ ಸ್ಪಂದನೆ
ಕುಂದಾಪುರ: ಬಸೂÅರು ಮೂಲದ ಪ್ರಶಾಂತ್ ಜರ್ಮನಿಯಲ್ಲಿ ಹತ್ಯೆ ಯಾದಾಗ ಸುಷ್ಮಾ ಸ್ವರಾಜ್ ತತ್‌ಕ್ಷಣ ಸ್ಪಂದಿಸಿದ್ದನ್ನು ಮರೆಯಲಾಗದು. ಪರಿಣಾಮಕಾರಿ ರಾಜಕಾರಣಿ
ಸುಷ್ಮಾ ಸ್ವರಾಜ್ ಕಾರ್ಯ ತತ್ಪರ ರಾಜಕಾರಣಿ. ಹಲವು ಬಾರಿ ನಾನು ನೆರವಿಗಾಗಿ ಸಂಪರ್ಕಿಸಿದ್ದಾಗಲೂ ತ್ವರಿತವಾಗಿ ಸ್ಪಂದಿಸಿದ್ದರು. ರಾಜ್ಯದಲ್ಲಿ ಪ್ರೊಟೆಕ್ಟ್ ಫ್ಯಾಮಿಲಿಯನ್ ಕಚೇರಿ ತೆರೆಯಬೇಕು ಎಂದು ನಾನು ಸಂಸದನಾಗಿದ್ದಾಗ ಕೇಳಿದ್ದೆ. ಅವರು ಕೂಡಲೇ ಕಚೇರಿ ಮಂಜೂರು ಮಾಡಿ ಪತ್ರ ಬರೆದಿದ್ದರು.
– ಕೆ. ಜಯಪ್ರಕಾಶ್ ಹೆಗ್ಡೆ ಮಾಜಿ ಸಂಸದರು