Advertisement
‘ನರೇಂದ್ರ ಮೋದಿ ಅವರನ್ನು ನಾನು ಪ್ರಧಾನಿ ಎಂದು ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಪ್ರಜಾಸತ್ತೆಯ ಬಿಗಿ ಕಪಾಳಮೋಕ್ಷ ಸಿಗಬೇಕು’ ಅನಿಸುತ್ತಿದೆ ಎಂದ ಮಮತಾ ಅವರ ವಿರುದ್ಧ ಟ್ವೀಟ್ ಮಾಡಿರುವ ಸುಷ್ಮಾ , ಮಮತಾ ಜಿ, ನೀವು ನಿಮ್ಮ ಎಲ್ಲಾ ಮಿತಿಗಳನ್ನು ಮೀರಿದ್ದೀರಿ. ನೀವು ಮುಖ್ಯಮಂತ್ರಿ, ಮೋದಿ ಜಿ ಪ್ರಧಾನಿ, ನಾಳೆ ನಿಮಗೆ ಅವರೊಂದಿಗೆ ಮಾತನಾಡಲೇ ಬೇಕು. ಇದಕ್ಕಾಗಿ ನಾನು ಬಶೀರ ಬದ್ರ್ ಅವರ ಕವಿತೆಯೊಂದನ್ನು ನೆನಪಿಸುತ್ತೇನೆ, ದುಶ್ಮನಿ ಜಮ್ ಕರ್ ಕರೋ ಲೇಕಿನ್ ಯೇ ಗುಂಜಾಯಿಶ್ ರಹೆ. ಜಬ್ ಕಭಿ ಹಮ್ ದೋಸ್ತ್ ಹೋ ಜಾಯೇ ತೋ ಶರ್ಮಿಂದಾ ನ ಹೋ ..(ವೈರತ್ವವನ್ನು ಮಾಡಿ ಆದರೆ ಮಿತಿ ಇರಲಿ, ನಾಳೆ ಮಿತ್ರರಾದರೆ ನಾಚಿಕೆ ಪಡಬೇಡಿ) ಎಂದು ಬರೆದಿದ್ದಾರೆ.
Related Articles
Advertisement