Advertisement

ಇಂದಿನಿಂದ ರಾಷ್ಟ್ರೀಯ ಕುಸ್ತಿ: 3 ವರ್ಷದ ಬಳಿಕ ಸುಶೀಲ್‌ ವಾಪಸ್‌

07:35 AM Nov 16, 2017 | Team Udayavani |

ಇಂದೋರ್‌: ಎರಡು ಬಾರಿಯ ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿ ಪಟು ಸುಶೀಲ್‌ ಕುಮಾರ್‌ 3 ವರ್ಷದ ಬಳಿಕ ಕುಸ್ತಿ ಅಖಾಡಕ್ಕೆ ಧುಮುಕುತ್ತಿದ್ದಾರೆ. 

Advertisement

ಗುರುವಾರದಿಂದ ಇಂದೋರ್‌ನಲ್ಲಿ ರಾಷ್ಟ್ರೀಯ ಕುಸ್ತಿ ಕೂಟ ಆರಂಭವಾಗಲಿದ್ದು ಎಲ್ಲರ ಚಿತ್ತ ಈಗ ಸುಶೀಲ್‌ ಕುಮಾರ್‌ ಮೇಲೆಯೆ ನೆಟ್ಟಿದೆ. 2014ರಲ್ಲಿ ಕೊನೆಯ ಸಲ ಸುಶೀಲ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾಗವಹಿಸಿದ್ದರು. ಚಿನ್ನದ ಪದಕ ಪಡೆದಿದ್ದರು. ಇದಾದ ಬಳಿಕ ಇವರು ಯಾವುದೇ ಅಂತಾರಾಷ್ಟ್ರೀಯ ಕೂಟದಲ್ಲಿ  ಭಾಗವಹಿಸಿರಲಿಲ್ಲ. 

ರಿಯೋ ಒಲಿಂಪಿಕ್ಸ್‌ ವೇಳೆ ವಿಶ್ವ ಕುಸ್ತಿ  ಒಕ್ಕೂಟ ಸುಶೀಲ್‌ ವಿಭಾಗದಲ್ಲಿದ್ದ ಸ್ಪರ್ಧೆ ಕೈ ಬಿಟ್ಟಿತ್ತು. ಹೀಗಾಗಿ 74 ಕೆ.ಜಿ ವಿಭಾಗದಲ್ಲಿ ಭಾಗವಹಿಸಲು ಸುಶೀಲ್‌ ನಿರ್ಧರಿಸಿದ್ದರು. ಆದರೆ ಭಾರತದ ನರಸಿಂಗ್‌ ಯಾದವ್‌ ಕೂಡ ಇದೇ ವಿಭಾಗದಲ್ಲಿ ಸ್ಪರ್ಧೆ ಮಾಡಬೇಕಿದ್ದರಿಂದ ಒಬ್ಬ ಆಟಗಾರನಿಗೆ ಮಾತ್ರ ಭಾಗವಹಿಸಲು ಅವಕಾಶ ಇತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಯಿತು. ನ್ಯಾಯಾಲಯದ ಮೆಟ್ಟಿಲವರೆಗೂ ತಲುಪಿತು. ಈ ನಡುವೆ ನರಸಿಂಗ್‌ ಯಾದವ್‌ ಹಠಾತ್‌ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದರು. ಬಳಿಕ ಯಾರಿಗೂ ಈ ವಿಭಾಗದಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next