ಕುರುಗೋಡು: ಡಿ.5 ಕ್ಕೆ ಮಾಜಿ ಸಿಎಂ ಕಾರ್ಯದರ್ಶಿ, ಕೆಪಿಸಿಸಿ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನಲೆ ಕುರುಗೋಡು ಸೇರಿದಂತೆ ಸುತ್ತಮುತ್ತ ಗ್ರಾಮದ ರೆಡ್ಡಿ ಅವರ ಅಭಿಮಾನಿಗಳು ಕಟೌಟ್ ಹಾಕಿಸಿ ಭರ್ಜರಿ ಸಿದ್ಧತೆ ಕೈಗೊಂಡಿದ್ದಾರೆ.
ಹುಟ್ಟುಹಬ್ಬದ ಅಂಗವಾಗಿ ಕುರುಗೋಡು ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ ಕಾರ್ಯಗಳು ನೆರೆವೇರಿಸಿ ನಂತರ ಶ್ರೀ ಆಂಜನೇಯ ಸ್ವಾಮಿ ಪೂಜೆ, ಸುಂಕ್ಲಮ್ಮ ದೇವಿಗೆ ವಿಶೇಷ ಪೂಜೆ, ಯಲ್ಲಾಪುರ ಕ್ರಾಸ್ ನ ಖಾದರ ಲಿಂಗ ತಾತ ಪೂಜೆ, ಶ್ರೀ ಸಿರಿಡಿ ಸಾಯಿಬಾಬಾ ಪೂಜೆ, ತದ ನಂತರ ಬಾದನಹಟ್ಟಿ ಗ್ರಾಮದ ಉಡುಸಲಮ್ಮ ದೇವಿಗೆ ಪೂಜೆ ಸಲ್ಲಿಸಿ ಪಟ್ಟಣದ ಇಂದಿರಾ ನಗರದಿಂದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಬಂದು ಸಮುದಾಯದ ಭವನದಲ್ಲಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಹುಟ್ಟುಹಬ್ಬಕ್ಕೆ ಕುರುಗೋಡು ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಚುನಾವಣೆ ಸಮೀಪಸುತ್ತಿರುವ ನಡುವೆಯೇ ಈ ಬಾರಿ ರೆಡ್ಡಿ ಕಂಪ್ಲಿಯ ಹೃದಯ ಭಾಗ ಆಗಿರುವ ಕುರುಗೋಡು ಕ್ಷೇತ್ರದಲ್ಲಿ ವಿವಿಧ ದೇವಸ್ಥಾನಗಳಿಗೆ ಪೂಜೆ ಸಲ್ಲಿಸುವುದರ ಮುಖಾಂತರ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದು ಇದರ ಪರಿಣಾಮ ಹಾಲಿ ಶಾಸಕ ಗಣೇಶ್ ಅವರಿಗೆ ಬಿಸಿ ತುಪ್ಪವಾಗಿದೆ.
Related Articles
2018ರ ವಿಧಾನಸಭಾ ಚುನಾವಣೆ ಯಲ್ಲಿ ಸೂರ್ಯನಾರಾಯಣ ರೆಡ್ಡಿ ಅವರು ಶ್ರಮ ವಹಿಸಿ ಗಣೇಶ್ ಅವರಿಗೆ ಟಿಕೆಟ್ ಕೊಡಿಸಿ ಪ್ರಚಾರದ ಕಣಕ್ಕೆ ಇಳಿದು ಗೆಲ್ಲಿಸಿ ಕೊಂಡಿದ್ದರು. ಆದರೆ ಕೆಲ ತಿಂಗಳುಗಳಿಂದ ರೆಡ್ಡಿ ಮತ್ತು ಶಾಸಕ ಗಣೇಶ್ ಅವರಿಗೆ ಬಿನ್ನಾಭಿಪ್ರಾಯ ಉಂಟಾಗಿ ಸರಿಯಾದ ಹೊಂದಾಣಿಕೆ ಕಾಣುತ್ತಿಲ್ಲ ಎಂಬ ವಿಚಾರ ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೆ ತಿಳಿದಿರುವ ವಿಷಯವಾಗಿದೆ.
2023 ರ ವಿಧಾನಸಭಾ ಚುನಾವಣೆಗೆ ರಾಮಸಾಗರ ಬಿ. ನಾರಾಯಣಪ್ಪ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಕಂಪ್ಲಿ ಗೆ ಟಿಕೆಟ್ ಕೊಡಿಸುವ ಯತ್ನ ದಲ್ಲಿ ರೆಡ್ಡಿ ಮುಂದಾಗಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಶಾಸಕ ಗಣೇಶ್ ಅವರಿಗೆ ಮುಂದಿನ ಚುನಾವಣೆ ಕಠಿಣವಾಗಲಿದೆ ಎಂಬ ಚರ್ಚೆಗಳು ಎಲ್ಲಂದರಲ್ಲಿ ಕೇಳಿ ಬರುತ್ತಿದೆ.
ಇನ್ನೂ ರೆಡ್ಡಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಅತಿ ಹೆಚ್ಚಿನ ರೀತಿಯಲ್ಲಿ ಭರ್ಜರಿ ಯಾಗಿ ಕಟೌಟ್ ಗಳನ್ನೂ ಹಾಕಿಸಿದ್ದು, ಹಾಲಿ ಶಾಸಕ ಗಣೇಶ್ ಅವರು ಚಿಕ್ಕ ಕಟೌಟ್ ನಲ್ಲಿ ರೆಡ್ಡಿ ಅವರಿಗೆ ಶುಭಾಶಯ ಕೊರಿರುವುದು ರೆಡ್ಡಿ ಅಭಿಮಾನಿಗಳಲ್ಲಿ ಗೊಂದಲ ಹೆಚ್ಚು ಮಾಡಿದಂತೆ ಕಾಣುತ್ತಿದೆ.