ಅಹಮದಾಬಾದ್: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ ನಿರ್ಣಾಯಕ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಟೀಂ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 234 ರನ್ ಗಳ ಭರ್ಜರಿ ಮೊತ್ತ ಗಳಿಸಿದರೆ, ಸಂಪೂರ್ಣ ಕುಸಿತ ಕಂಡ ನ್ಯೂಜಿಲ್ಯಾಂಡ್ ಕೇವಲ 66 ರನ್ ಗೆ ಆಲೌಟಾಯಿತು.
ಅದ್ಭುತ ಫಾರ್ಮ್ ನಲ್ಲಿರುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರ ಮತ್ತೊಂದು ಶತಕ ಅಹಮದಾಬಾದ್ ಪಂದ್ಯದ ಹೈಲೈಟ್ ಆಗಿತ್ತು. ಆದರೆ ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಕ್ಯಾಚ್ ಗಳು ಎಲ್ಲರ ಗಮನ ಸೆಳೆದವು.
ಇದನ್ನೂ ಓದಿ:ಮಂಗಳೂರು: ಪಾಲಿಕೆ ಆಯುಕ್ತ ವರ್ಗಾವಣೆ; ನೂತನ ಆಯುಕ್ತರಾಗಿ ಚನ್ನಬಸಪ್ಪ ಕೆ. ನೇಮಕ
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಫಿನ್ ಅಲೆನ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಕ್ಯಾಚ್ ಗಳನ್ನು ಸ್ಲಿಪ್ ನಲ್ಲಿದ್ದ ಸೂರ್ಯ ಪಡೆದರು.
Related Articles
ಮೊದಲು ತನ್ನ ಮೊದಲ ಓವರ್ನಲ್ಲಿ ಮತ್ತು ನಂತರ ಎರಡನೇ ಓವರ್ ನಲ್ಲಿ ಹಾರ್ದಿಕ್ ಎರಡು ಪ್ರಮುಖ ವಿಕೆಟ್ಗಳನ್ನು ಕಿತ್ತರು. ಎರಡೂ ಸಂದರ್ಭಗಳಲ್ಲಿ ಚೆಂಡು ಬ್ಯಾಟ್ ನ ಹೊರ ಅಂಚನ್ನು ಬಡಿದು ಸೂರ್ಯಕುಮಾರ್ ಕೈ ಸೇರಿತು. ಎರಡೂ ಬಾರಿ, ಚೆಂಡನ್ನು ಹಿಡಿಯಲು ಸೂರ್ಯ ಜಿಗಿಯಬೇಕಾಯಿತು. ಫಿನ್ ಅಲೆನ್ ಅವರ ಕ್ಯಾಚ್ ಪಡೆದ ವಿಡಿಯೋ ಇಲ್ಲಿದೆ. ಇದರಂತೆಯೇ ಸೂರ್ಯ ಮತ್ತೊಂದು ಕ್ಯಾಚ್ ಪಡೆದರು.